ವಿದೇಶಿ ಟಿ20 ಲೀಗ್‌ ಟೂರ್ನಿಗಳಲ್ಲಿ ಪಾಲ್ಗೊಳ್ಳದಂತೆ  ಧೋನಿಗೆ ಬಿಸಿಸಿಐ ಖಡಕ್‌ ಸೂಚನೆ

Prasthutha|

ಐಪಿಎಲ್‌ ಯಶಸ್ಸಿನಿಂದ ಪ್ರೇರಣೆ ಪಡೆದು ವಿದೇಶಗಳಲ್ಲಿ ಆರಂಭವಾಗುತ್ತಿರುವ ಟಿ20 ಲೀಗ್‌ ಟೂರ್ನಿ ಆಯೋಜಕರು, ಭಾರತೀಯ ದಿಗ್ಗಜ ಕ್ರಿಕೆಟಿಗರ ಮೇಲೆ ಕಣ್ಣಿಟ್ಟಿದ್ದಾರೆ. ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಆಯೋಜಿಸುತ್ತಿರುವ ಇಂಟರ್‌ನ್ಯಾಶನಲ್ ಟಿ20 ಲೀಗ್‌ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಆಯೋಜನೆ ಮಾಡುತ್ತಿರುವ ಟಿ20 ಲೀಗ್‌ ಟೂರ್ನಿಗಳಲ್ಲಿ ಎಂಎಸ್‌ ಧೋನಿ ಮೆಂಟರ್‌ ಪಾತ್ರ ನಿರ್ವಹಿಸಲಿದ್ದಾರೆ ಎಂಬ ಸುದ್ದಿಗೆ ಬಿಸಿಸಿಐ ಕೆಂಡಾಮಂಡಲವಾಗಿದೆ.

- Advertisement -

`ಟೀಮ್‌  ಇಂಡಿಯಾದ ಸದಸ್ಯ, ಬಿಸಿಸಿಐ ಗುತ್ತಿಗೆ ಹೊಂದಿರುವ, ದೇಶಿ ಟೂರ್ನಿಗಳಲ್ಲಿ ಆಡುವ ಅಥವಾ ನಿವೃತ್ತಿಯಾಗಿರುವ ಯಾವುದೇ ಭಾರತೀಯ ಆಟಗಾರರು ವಿದೇಶಿ ಟಿ20 ಲೀಗ್‌ ಟೂರ್ನಿಗಳಲ್ಲಿ ಆಟಗಾರ ಸೇರಿದಂತೆ ಯಾವುದೇ ಜವಾಬ್ಧಾರಿ ಹೊಂದಲು ಸಾಧ್ಯವಿಲ್ಲ ಎಂದು  ಬಿಸಿಸಿಐ ಸ್ಪಷ್ಟಪಡಿಸಿದೆ.

ಸಿಎಸ್‌ಎ ಟಿ20 ಲೀಗ್‌ನಲ್ಲಿ ಎಲ್ಲಾ ಆರು ತಂಡಗಳು ಕೂಡ ಐಪಿಎಲ್ ಫ್ರಾಂಚೈಸಿಯ ಮಾಲೀಕರ ಪಾಲಾಗಿವೆ. ಹೀಗಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ಮಾಲೀಕತ್ವದ ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ ತಂಡದ ಮೆಂಟರ್‌ ಆಗಿ ಮಹೇಂದ್ರ ಸಿಂಗ್‌ ಧೋನಿ ನೇಮಕವಾಗುತ್ತಾರೆ ಎನ್ನಲಾಗಿತ್ತು. ಈ ಸುದ್ದಿ ಹೊರಬರುತ್ತಲೇ ಎಚ್ಚೆತ್ತುಕೊಂಡಿರುವ ಬಿಸಿಸಿಐ, ವಿದೇಶಿ ಟಿ20 ಲೀಗ್‌ ಟೂರ್ನಿಗಳಲ್ಲಿ ಎಂಎಸ್‌ ಧೋನಿ ಭಾಗವಹಿಸುವುದಾದರೆ ಅವರು ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ವಿದೇಶಿ ಟಿ20 ಲೀಗ್‌ ಟೂರ್ನಿಗಳಲ್ಲಿಭಾಗವಹಿಸಲಬೇಕಾದರೆ ಧೋನಿ ಐಪಿಎಲ್‌ನಿಂದ ನಿವೃತ್ತಿಯಾಗಬೇಕು ಎಂದು ನೇರವಾಗಿ ಹೇಳಿದೆ.



Join Whatsapp