ಮಂಗಳೂರು ವಿವಿ ಕಾಲೇಜಿನಲ್ಲಿ ರದ್ದುಗೊಂಡ ಬಳಿಕವೂ ನಡೆದ “ಭಾರತ ಮಾತಾ ಪೂಜನಾ” ಕಾರ್ಯಕ್ರಮ !

Prasthutha|

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ಹಂಪನಕಟ್ಟೆ ಕಾಲೇಜಿನಲ್ಲಿ ನಡೆಸಲು ಉದ್ದೇಶಿಸಿದ ಭಾರತ ಮಾತಾ ಪೂಜನಾ ಕಾರ್ಯಕ್ರಮದ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿದ ಬೆನ್ನಲ್ಲೇ ಕಾರ್ಯಕ್ರಮ ರದ್ದುಪಡಿಸಲಾಗಿದೆ ಎಂದು ಹೇಳಲಾಗಿದ್ದರೂ ಶುಕ್ರವಾರ ಕಾಲೇಜಿನ ಬನಸಿರಿಯಲ್ಲಿ ಕಾರ್ಯಕ್ರಮ ನಡೆಸಿರುವ ಬಗ್ಗೆ ವರದಿಯಾಗಿದೆ.

- Advertisement -


ಸ್ವತಃ ಎಬಿವಿಪಿ ನಾಯಕರು ಕಾರ್ಯಕ್ರಮದ ಫೋಟೋವನ್ನು ಬಿಡುಗಡೆ ಮಾಡಿದ್ದಾರೆ.


ಈ ಬಗ್ಗೆ UCM ಎಬಿವಿಪಿ ತನ್ನ ಇನ್ಟಾ ಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದ ವಿಶ್ವವಿದ್ಯಾನಿಲಯ ಕಾಲೇಜು ವಿದ್ಯಾರ್ಥಿ ಸಂಘ, 12ರಂದು ಕಾಲೇಜಿನ ಆವರಣದಲ್ಲಿರುವ ಬನಸಿರಿಯಲ್ಲಿ ಭಾರತ ಮಾತಾ ಪೂಜನಾ ಕಾರ್ಯಕ್ರಮವನ್ನು ಆಯೋಜಿಸಿತು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಪುಷ್ಪಾರ್ಚನೆಯ ಮೂಲಕ ಭಾರತಾಂಬೆಗೆ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲರಾದ ಡಾ.ಅನಸೂಯಾ ರೈ, ವಿದ್ಯಾರ್ಥಿ ಸಂಘ ನಿರ್ದೇಶಕರಾದ ಡಾ.ಹರೀಶ ಎ, ಉಪನ್ಯಾಸಕಿ ಡಾ.ಸುಧಾ ವೈದ್ಯ ಉಪಸ್ಥಿತರಿದ್ದರು ಎಂದು ಬರೆದುಕೊಂಡಿವೆ.
ಸರ್ಕಾರಿ ಕಾಲೇಜುಗಳಲ್ಲಿ ಯಾವುದೇ ಧಾರ್ಮಿಕ ಆಚರಣೆಗಳನ್ನು ನಡೆಸುವಂತಿಲ್ಲ ಎಂಬ ಸ್ಪಷ್ಟ ಸೂಚನೆ ಇದೆ ಎಂಬ ಕಾರಣ ಹಿಜಾಬ್ ನಿಷೇಧ ಮಾಡಿದ ಕಾಲೇಜು ಈಗ ಭಾರತ ಮಾತಾ ಪೂಜನಾ ಮಾಡಿ ಸಮಾನತೆಗೆ ಧಕ್ಕೆ ತಂದಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ.

- Advertisement -


ಈ ಮೊದಲು ನಡೆಸಲು ಉದ್ದೇಶಿಸಿದ್ದ ಕಾರ್ಯಕ್ರಮದ ಭಾರತ ಮಾತಾ ಫೋಟೋದಲ್ಲಿ ಭಾಗವಾಧ್ವಜವಿತ್ತು. ಆದರೆ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಇಡಲಾಗಿದ್ದ ಫೋಟೋದಲ್ಲಿ ರಾಷ್ಟ್ರಧ್ವಜ ಕಂಡುಬಂದಿದೆ.

Join Whatsapp