ಬಿಬಿಎಂಪಿ ಮುಖ್ಯ ಶಿಕ್ಷಕರಿಗೆ ಕಾಶ್ಮೀರ, ಸಿಂಗಾಪುರ ಪ್ರವಾಸದ ಆಫರ್!

Prasthutha|

ಬೆಂಬಳೂರು: ಬಿಬಿಎಂಪಿ ಶಾಲೆಗಳಲ್ಲಿ ಎಸ್ಸೆಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರುವ ಮುಖ್ಯ ಶಿಕ್ಷಕರು ಮತ್ತು ಪ್ರಾಂಶುಪಾಲರಿಗೆ ಕಾಶ್ಮೀರ ಮತ್ತು ಸಿಂಗಾಪುರಕ್ಕೆ ಪ್ರವಾಸಕ್ಕೆ ಕಳುಹಿಸುವುದಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಶಿಕ್ಷಣ ಇಲಾಖೆ ಘೋಷಿಸಿದೆ.

- Advertisement -

 ಬಿಬಿಎಂಪಿ ಶಿಕ್ಷಣ ಇಲಾಖೆಯ ವಿಶೇಷ ಆಯುಕ್ತ ರಾಮ್ ಪ್ರಸಾತ್ ಮನೋಹರ್  ಎಪಿಜೆ ಅಬ್ದುಲ್ ಕಲಾಂ ಡ್ರೀಮ್ ಸ್ಕೂಲ್ ಯೋಜನೆಗೆ ಚಾಲನೆ  ನೀಡಿದರು.

ನಂತರ ಮಾತನಾಡಿದ ಅವರು, ಶೇ.80-100 ಫಲಿತಾಂಶ  ತರುವ ಮುಖ್ಯಶಿಕ್ಷಕರು ಮತ್ತು ಪ್ರಾಂಶುಪಾಲರಿಗೆ ಕಾಶ್ಮೀರ ಮತ್ತು ಸಿಂಗಾಪುರಕ್ಕೆ ಪ್ರವಾಸಕ್ಕೆ ಕಳುಹಿಸಲಾಗುವುದು. ವಿದ್ಯಾರ್ಥಿಗಳು ಶೇ.100 ಅಂಕ ಪಡೆದರೆ ಅವರನ್ನೂ ಸಿಂಗಾಪುರಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು.

- Advertisement -

ಬಿಬಿಎಂಪಿ ಶಿಕ್ಷಣ ಇಲಾಖೆಯ ಅಡಿಯಲ್ಲಿ 93ನರ್ಸರಿ ಶಾಲೆಗಳು, 16 ಪ್ರಾಥಮಿಕ ಶಾಲೆಗಳು, 18ಪದವಿ ಪೂರ್ವ ಕಾಲೇಜುಗಳು, 4ಪದವಿ ಕಾಲೇಜುಗಳು ಹಾಗೂ 2ಸ್ನಾತಕೋತ್ತರ ಪದವಿ ಕಾಲೇಜುಗಳು ಸೇರಿದಂತೆ ಒಟ್ಟು 165 ಶಾಲಾ/ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು

ಈಸಂದರ್ಭದಲ್ಲಿ  ಸಹಾಯಕ ಆಯುಕ್ತರಾದ ಉಮೇಶ್, ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು(ಶಿಕ್ಷಣ) ವಿ.ಜಿ ಲೋಕೇಶ್, ಹಿರಿಯ ಸಹಾಯ ನಿರ್ದೇಶಕರಾದ ಹನುಮಂತಯ್ಯ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.



Join Whatsapp