ಲಂಡನ್: ಇಂಗ್ಲೆಂಡ್ ನಲ್ಲಿ ನಡೆದ ಕ್ರಿಕೆಟ್ ಪಂದ್ಯವೊಂದರಲ್ಲಿ ಬ್ಯಾಟ್ಸ್ ಮೆನ್ ಓರ್ವ ಪ್ಯಾಡ್ ಧರಿಸದೇ ಮೈದಾನಕ್ಕಿಳಿದ ಅಪರೂಪದ ಪ್ರಸಂಗ ನಡೆದಿದೆ.
ಸೌತೆಂಡ್ ಸಿವಿಕ್ ಕ್ರಿಕೆಟ್ ಕ್ಲಬ್ ನ ಆಟಗಾರ ಮಾರ್ಟಿನ್ ಹ್ಯೂಸ್ ಬ್ಯಾಟಿಂಗ್ ಗೆ ಇಳಿದಿದ್ದರು. ಕ್ರೀಸ್ ಗೆ ಬಂದ ಕೂಡಲೇ ಅಂಪೈರ್ ಜೊತೆ ಮಿಡಲ್ ಸ್ಟಂಪ್ ಲೈನ್ ಕೇಳಿದ್ದಾರೆ. ಈ ವೇಳೆ ಅಂಪೈರ್ ಫೋನ್ ನಲ್ಲಿ ಮಾತನಾಡುತ್ತಿದ್ದರು. ತಕ್ಷಣವೇ ಎದುರಾಳಿ ತಂಡದ ವಿಕೆಟ್ ಕೀಪರ್, ನೀವು ಪ್ಯಾಡ್ ಧರಿಸದೇ ಬಂದಿದ್ದೀರಿ ಎಂದು ಹೇಳಿದ್ದಾರೆ. ಆದರೆ ಕೀಪರ್ ತಮಾಷೆ ಮಾಡುತ್ತಿರುವುದಾಗಿ ಭಾವಿಸಿದ ಮಾರ್ಟಿನ್ ಹ್ಯೂಸ್, ಅದೆಲ್ಲಾ ನನಗೆ ಬೇಕಾಗಿಲ್ಲ ಎಂದು ಉತ್ತರಿಸಿದ್ದಾರೆ.
ಕೀಪರ್ ಮತ್ತೊಮ್ಮೆ ಪ್ಯಾಡ್ ಕುರಿತು ನೆನಪಿಸಿದಾಗ ಹ್ಯೂಸ್ ಗೆ ತಾವು ಪ್ಯಾಡ್ ಧರಿಸಲು ಮರೆತಿರುವುದು ಗೊತ್ತಾಗಿದೆ. ಕೂಡಲೇ ಪೆವಿಲಿಯನ್ನತ್ತ ಓಡಿದ್ದಾರೆ. ಈ ವೇಳೆ ಮತ್ತೊಂದು ತುದಿಯಲಿದ್ದ ಸಹ ಆಟಗಾರ ಸೇರಿದಂತೆ ಉಳಿದ ಫೀಲ್ಡರ್ ಗಳು , ಅಂಪೈರ್ ಜೋರಾಗಿ ನಗುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ.