ಬ್ಯಾರಿ ಕಲಾವಿದ ರಿಯಾಝ್ ಕಲಾಕರ್ ನಿಧನ

Prasthutha|

ಮಂಗಳೂರು : ಬ್ಯಾರಿ ಸಮುದಾಯದ ಬಹುಮುಖ ಪ್ರತಿಭೆ ರಿಯಾಝ್ ಕಲಾಕರ್ (48) ನಿಧನರಾಗಿದ್ದಾರೆ. ಇತ್ತೀಚೆಗೆ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದ ಅವರು ಚಿಕಿತ್ಸೆ ಫಲಿಸದೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

- Advertisement -

ಅವರು ಪತ್ನಿ ಮತ್ತು ನಾಲ್ವರು ಮಕ್ಕಳು, ಅಪಾರ ಬಂಧುಬಳಗವನ್ನು ಅಗಲಿದ್ದಾರೆ.


ಬ್ಯಾರಿ ಕಲಾವಿದರಾಗಿದ್ದ ಅವರು ನಾಟಕಕಾರ, ನಟ, ಲೇಖಕ, ಕವಿ, ಸಮಾಜ ಸೇವಕರಾಗಿದ್ದರು. ಮೂಲತಃ ಸುರತ್ಕಲ್ ಬಳಿಯ ಕಾಟಿಪಳ್ಳದವರಾದ ರಿಯಾಝ್ ಕಲಾಕರ್ ಸದ್ಯ ಕಾಸರಗೋಡು ಜಿಲ್ಲೆಯ ಬಂದಿಯೋಡು ಎಂಬಲ್ಲಿ ನೆಲೆಸಿದ್ದರು. ಮಂಗಳೂರಿನಲ್ಲಿ ಈವೆಂಟ್ ಮ್ಯಾನೇಜ್ಮೆಂಟ್ ನಡೆಸುತ್ತಿದ್ದರು.

- Advertisement -


ರಿಯಾಝ್ ಕಲಾಕರ್ ನಿಧನಕ್ಕೆ ಬ್ಯಾರಿ ಸಮುದಾಯದ ಗಣ್ಯರು ಸೇರಿದಂತೆ ಹಲವು ಮಂದಿ ಕಂಬನಿ ಮಿಡಿದಿದ್ದಾರೆ. ರಿಯಾಝ್ ಅವರ ದಫನ ಕಾರ್ಯ ಬಂದಿಯೋಡು ದಫನ ಭೂಮಿಯಲ್ಲಿ ನೆರವೇರಲಿದೆ.

Join Whatsapp