ಬಂಟ್ವಾಳ: ಮಲಗಿದ್ದಲ್ಲೇ ಯುವತಿಯೋರ್ವಳು ಮೃತಪಟ್ಟ ಘಟನೆ ವಗ್ಗ ಸಮೀಪದ ಮದ್ವ ಎಂಬಲ್ಲಿ ನಡೆದಿದೆ.
ಪುಳಿಮಜಲು ನಿವಾಸಿ ರಾಜ ಅವರ ಪುತ್ರಿ ಮಿತ್ರ ಶೆಟ್ಟಿ (23) ಮೃತಪಟ್ಟ ಯುವತಿ ಎಂದು ಗುರುತಿಸಲಾಗಿದೆ.
ರಾತ್ರಿ ಊಟ ಮಾಡಿ ಮಲಗಿದ ಮಿತ್ರ ಶೆಟ್ಟಿ ಬೆಳಿಗ್ಗೆ ನೋಡುವಾಗ ಮೃತಪಟ್ಟ ಬಗ್ಗೆ ವರದಿಯಾಗಿದೆ.
ತಂದೆ ಮತ್ತು ಅಣ್ಣ ಇಬ್ಬರು ಬೆಂಗಳೂರಿನಲ್ಲಿ ಕೆಲಸದಲ್ಲಿರುವ ಕಾರಣ ತಾಯಿ ಮತ್ತು ಮಗಳು ಪ್ರಸ್ತುತ ಕಾವಳಪಡೂರು ಗ್ರಾಮದ ಮದ್ವ ಕಂಬಲಡ್ಡ ದೊಡ್ಡಮ್ಮನ ಮನೆಯಲ್ಲಿ ವಾಸವಾಗಿದ್ದರು. ರಾತ್ರಿ ಊಟ ಮಾಡಿ ಒಟ್ಟಿಗೆ ಮಲಗಿದ್ದವಳು ಬೆಳಿಗ್ಗೆ ಎದ್ದು ನೋಡುವಾಗ ಎದ್ದೇಳುವುದಿಲ್ಲ ಮಾತನಾಡುವುದಿಲ್ಲ ಎಂದು ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿದಾಗ ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದಾರೆ.
ಮೃತದೇಹವನ್ನು ದೇರಳಕಟ್ಟೆ ಕೆಎಸ್.ಹೆಗ್ಡೆ ಯಲ್ಲಿ ಮರಣೋತ್ತರ ಪರೀಕ್ಷೆ ಗಾಗಿ ಕೊಂಡೋಯ್ಯಲಾಗಿದೆ. ಆರಂಭದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಹೇಳಲಾಗುತ್ತಿತ್ತು. ಆದರೆ ಬ್ರೈನ್ ಎಮರೇಜ್ ನಿಂದಲೂ ಸಾವು ಆಗಿರಬಹುದು ಎಂಬ ಸಂಶಯವಿದ್ದು, ವೈದ್ಯರು ಮರಣೋತ್ತರ ಪರೀಕ್ಷೆಯ ವರದಿಯನ್ನು ನೀಡಿದ ಬಳಿಕ ಸಾವಿನ ಸ್ಪಷ್ಟವಾದ ಕಾರಣ ಸಿಗಬಹುದು. ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಸಹಜ ಸಾವು ಎಂದು ಪ್ರಕರಣ ದಾಖಲಾಗಿದೆ.