ಸಾವಿರಾರು ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣ ಮೊಟಕುಗೊಳಿಸಿದ ಹಿಜಾಬ್ ನಿಷೇಧ – ಪಿಯುಸಿಎಲ್ ವರದಿ

Prasthutha|

ಮಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ನ್ನು ನಿಷೇಧಿಸುವ ರಾಜ್ಯ ಸರಕಾರದ ಆದೇಶ ಮತ್ತು ನಿರ್ದೇಶನವನ್ನು ಎತ್ತಿಹಿಡಿದ ಹೈಕೋರ್ಟ್ ತೀರ್ಪಿನ ಪರಿಣಾಮವಾಗಿ ಕರ್ನಾಟಕದಲ್ಲಿ ಸಾವಿರಾರು ಮುಸ್ಲಿಂ ಹುಡುಗಿಯರು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂಬ ಆತಂಕಕಾರಿ ವರದಿಯನ್ನು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಬಹಿರಂಗಪಡಿಸಿದೆ.

- Advertisement -

ಹಿಜಾಬ್ ನಿಷೇಧ ಪ್ರಕರಣದ ಬಳಿಕ ಪಿಯುಸಿಎಲ್ ರಾಜ್ಯದಾದ್ಯಂತ‌ ವಿದ್ಯಾರ್ಥಿಗಳಿಂದ ಮಾಹಿತಿ ಸಂಗ್ರಹಿಸಿದ್ದು, ಹೈಕೋರ್ಟ್ ತೀರ್ಪು ಹಲವು ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಅಭಿಪ್ರಾಯಪಟ್ಟಿದೆ.

ತಾರತಮ್ಯವಿಲ್ಲದ ಶಿಕ್ಷಣದ ಹಕ್ಕು, ಸಮಾನತೆಯ ಹಕ್ಕು, ಘನತೆಯ ಹಕ್ಕು, ಖಾಸಗಿತನದ ಹಕ್ಕು, ಅಭಿವ್ಯಕ್ತಿಯ ಹಕ್ಕು.. ಮೊದಲಾದ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಪಿಯುಸಿಎಲ್ ವಿವರಿಸಿದೆ.

- Advertisement -

ಈ ರೀತಿಯಾದ ತೀರ್ಪಿನಿಂದಾಗಿ ಹಲವು ವಿದ್ಯಾರ್ಥಿನಿಯರು ತಮ್ಮ ಶೈಕ್ಷಣಿಕ ಚಟುವಟಿಕೆಯನ್ನೇ ತೊರೆಯುವಂತಾಗಿದೆ ಎಂದು ವರದಿ ತಿಳಿಸಿದೆ.

ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿರುವ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಪಿಯುಸಿಎಲ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದಲ್ಲದೆ,ಸರಕಾರವು ಇಂತಹ “ಹಠಾತ್, ನಿರಂಕುಶ ಮತ್ತು ಅಸಾಂವಿಧಾನಿಕ” ನಿರ್ಧಾರವನ್ನು ಯಾಕೆ ಮಾಡಿದೆ ಎಂಬುದರ ಕುರಿತು ತನಿಖೆ ನಡೆಸುವಂತೆ ನ್ಯಾಯಾಂಗವನ್ನು ಒತ್ತಾಯಿಸಿದೆ.



Join Whatsapp