ಶಿವಮೊಗ್ಗ: ಗಣಪತಿ ವಿಸರ್ಜನಾ ಯಾತ್ರೆಯಲ್ಲಿ ರಾರಾಜಿಸಿದ ಭಯೋತ್ಪಾದಕ ಗೋಡ್ಸೆ ಫೋಟೊ

Prasthutha|

ಅಮೀರ್ ಅಹ್ಮದ್ ವೃತ್ತದಲ್ಲಿ ಸಾವರ್ಕರ್ ಮಹಾದ್ವಾರ

- Advertisement -

ಶಿವಮೊಗ್ಗ: ಶಿವಮೊಗ್ಗದಲ್ಲಿ ನಡೆದ ಗಣಪತಿ ವಿಸರ್ಜನಾ ಶೋಭಯಾತ್ರೆಯಲ್ಲಿ ಗಾಂಧಿ ಹಂತಕ, ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ನಾಥೂರಾಂ ಗೋಡ್ಸೆಯ ಫೋಟೋ ರಾರಾಜಿಸಿದೆ.

ಹಿಂದೂ ಮಹಾಸಭಾ ವತಿಯಿಂದ ಕೋಟೆ ಭೀಮೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ವಿಗ್ರಹದ‌ ಶೋಭಯಾತ್ರೆಯ ವೇಳೆ ಗೋಡ್ಸೆ, ಸಾವರ್ಕರ್ ಫೋಟೋಗಳು ಕಂಡು ಬಂದಿದೆ.

- Advertisement -

ಭಗತ್ ಸಿಂಗ್, ಬಾಲಗಂಗಾಧರ ತಿಲಕ್ ಮತ್ತಿತರ ಸ್ವಾತಂತ್ರ್ಯ ಹೋರಾಟಗಾರರ ಫೋಟೋದೊಂದಿಗೆ ಇತ್ತೀಚೆಗೆ ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷ, ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಫೋಟೋಗಳು ಇದ್ದವು. ಜೊತೆಗೆ ನಟ ಪುನೀತ್ ರಾಜ್‌ಕುಮಾರ್ ಫೋಟೋ ಕೂಡಾ ಶೋಭಯಾತ್ರೆಯಲ್ಲಿ ಕಂಡು ಬಂದಿದೆ.

ಕೇಸರೀ ಶಾಲು, ಪೇಟ ಮತ್ತು ಭಗವಾಧ್ವಜ ಹಿಡಿದು, ಉದ್ರೇಕಕಾರಿ ಘೋಷಣೆ ಕೂಗುತ್ತಾ ಮೆರವಣಿಗೆ ಸಾಗಿದ್ದಲ್ಲದೇ, ಇತ್ತೀಚೆಗೆ ಸಾವರ್ಕರ್ ಬ್ಯಾನರ್ ಹಾಕಿ ವಿವಾದಕ್ಕೆ ಕಾರಣವಾಗಿದ್ದ ಅಮೀರ್ ಅಹ್ಮದ್ ವೃತ್ತದಲ್ಲಿ ಸಾವರ್ಕರ್ ಮಹಾದ್ವಾರ ಮಾಡಿದ್ದು ಜಿದ್ದಿಗೆ ಬಿದ್ದು ಉತ್ಸವ ಆಚರಿಸಿದಂತೆ ಇತ್ತು.

ಶೋಭಯಾತ್ರೆಯ ಉದ್ದಕ್ಕೂ ಬಿಗಿ ಪೊಲೀಸ್ ಸರ್ಪಗಾವಲನ್ನು ಹಾಕಲಾಗಿತ್ತು.



Join Whatsapp