September 17, 2021

ಬಿಹಾರದಲ್ಲಿ ಮುಂದುವರೆದ ಬ್ಯಾಂಕ್ ಅಧಿಕಾರಿಗಳ ಎಡವಟ್ಟು: ರೈತನ ಖಾತೆಗೆ 52 ಕೋಟಿ ರೂ. ಜಮೆ

ಬಿಹಾರ: ಕಳೆದ ಕೆಲವು ದಿನಗಳಲ್ಲಿ ಯಾರ್ಯಾರದ್ದೋ ಬ್ಯಾಂಕ್​ ಅಕೌಂಟ್​ ಗಳಿಗೆ ಏಕಾಏಕಿ ಹಣ ಜಮೆ ಆಗುತ್ತಿದೆ.ಇಂದು ಮತ್ತೆ ಬಿಹಾರ ಬಡ ರೈತನ ಖಾತೆಗೆ 52 ಕೋಟಿ ರೂಪಾಯಿ ಜಮೆ ಆಗಿದೆ.

ಈ ಬಾರಿ ಹೀಗೆ ಅನುಭವ ಆಗಿದ್ದು ಬಡ ರೈತ ರಾಮ್ ​ಬಹದ್ದೂರ್​ ಶಾ ಎಂಬುವರಿಗೆ ಇವರು ತಮ್ಮ ಪಿಂಚಣಿಯ ಬಗ್ಗೆ ವಿಚಾರಿಸಲು ಸಮೀಪದ ಗ್ರಾಹಕರ ಸೇವಾ ಕೇಂದ್ರಕ್ಕೆ ಭೇಟಿ ನೀಡಿದ್ದರು. ಅಲ್ಲಿ ಹೋಗಿ ಆಧಾರ್​ ಕಾರ್ಡ್​ ನೀಡಿ, ತಮ್ಮ ಹೆಬ್ಬೆರಳನ್ನು ಪಂಚ್​ ಮಾಡಿ ದೃಢೀಕರಣ ಮಾಡಿದ ಬಳಿಕ ಅಕೌಂಟ್ ​ನಲ್ಲಿರುವ ಹಣದ ಮೊತ್ತ ಹೇಳಲಾಯಿತು. ಆ ಮೊತ್ತವನ್ನು ನೋಡಿ ಸಿಎಸ್ ​ಪಿ ಅಧಿಕಾರಿ ಮತ್ತು ರಾಮ್​ ಬಹದ್ದೂರ್ ಶಾ ಇಬ್ಬರಿಗೂ ಶಾಕ್​ ಆಗಿದೆ.  ಈ ಹಣ ಎಲ್ಲಿಂದ ಬಂತು ಎಂಬುದು ಗೊತ್ತಿಲ್ಲ ಎಂದು ರಾಮ್​ ಬಹದ್ದೂರ್​ ಶಾ ತಿಳಿಸಿದ್ದಾರೆ.

ಎರಡು ದಿನಗಳ ಹಿಂದೆ ಖಗಾರಿಯಾ ಎಂಬಲ್ಲಿ ರಂಜಿತ್ ಎಂಬುವರ ಅಕೌಂಟ್ ​ಗೆ 5.5 ಲಕ್ಷ ರೂಪಾಯಿ ಬಂದಿತ್ತು. ನಿನ್ನೆ ಇಬ್ಬರು ಶಾಲೆಗೆ ಹೋಗುವ ಬಾಲಕರ ಖಾತೆಗೆ ಕೋಟ್ಯಂತರ ರೂಪಾಯಿ ಜಮಾ ಆಗಿತ್ತು. ಕತಿಹಾರ ಜಿಲ್ಲೆಯ ಪಾಸ್ಟಿಯಾ ಗ್ರಾಮದ ಬಾಲಕ ಅಸಿತ್​ ಕುಮಾರ್ ಖಾತೆಗೆ 900 ಕೋಟಿ ರೂಪಾಯಿ ಬಂದಿದ್ದರೆ, ಗುರುಚಂದ್ರ ವಿಶ್ವಾಸ್​ ಎಂಬುವನ ಖಾತೆಗೆ 60 ಕೋಟಿ ರೂ.ವರ್ಗಾವಣೆಯಾಗಿತ್ತು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!