ಬಾಂಗ್ಲಾದೇಶ ಚುನಾವಣೆ: ಶೇಖ್ ಹಸೀನಾ ರಾಜಕೀಯ ಭವಿಷ್ಯ ಇಂದು ತೀರ್ಮಾನ

Prasthutha|

ಢಾಕಾ:: ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆಗೆ ಇಂದು ಬೆಳಗ್ಗೆಯಿಂದ ಮತದಾನ ಪ್ರಾರಂಭಗೊಂಡಿದೆ. ನಿನ್ನೆ ನಡೆದಿದ್ದ ಚುನಾವಣಾ ಪೂರ್ವ ಹಿಂಸಾಚಾರವು ಮತದಾನದ ಮೇಲೆ ಕರಿ ನೆರಳು ಚಾಚಿದೆ. ಬಾಂಗ್ಲಾದೇಶ ರಾಷ್ಟ್ರೀಯ ಪಕ್ಷವು ಶನಿವಾರದಿಂದ ಎರಡು ದಿನಗಳ ಕಾಲ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಇದೆಲ್ಲದರ ನಡುವೆಯೇ ಪ್ರಧಾನಿ ಶೇಖ್ ಹಸೀನಾರ ಅವಾಮಿ ಲೀಗ್ ನೇತೃತ್ವದ ಮೈತ್ರಿಕೂಟ ಸತತ ಐದನೆಯ ಬಾರಿಗೆ ಅಧಿಕಾರಕ್ಕೆ ಮರಳುವತ್ತ ಕಣ್ಣು ನೆಟ್ಟಿದೆ.

- Advertisement -

ಬಾಂಗ್ಲಾದೇಶ ಕಾಲಮಾನವಾದ 8 ಗಂಟೆಗೆ ಮತದಾನ ಪ್ರಾರಂಭಗೊಂಡಿದ್ದು, ಸಂಜೆ ಐದು ಗಂಟೆಗೆ ಮತದಾನ ಮುಕ್ತಾಯಗೊಳ್ಳಲಿದೆ. ಜನವರಿ 8ರಂದು ಫಲಿತಾಂಶ ಪ್ರಕಟವಾಗಲಿದೆ.

ಈ ಚುನಾವಣೆಯಲ್ಲಿ ಒಟ್ಟು 11.96 ಕೋಟಿ ನೋಂದಾಯಿತ ಮತದಾರರು ಮತದಾನ ಮಾಡಲು ಅರ್ಹರಾಗಿದ್ದಾರೆ. ಚುನಾವಣೆಗಾಗಿ 42,000ಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಬಾಂಗ್ಲಾದೇಶ ಚುನಾವಣಾ ಆಯೋಗ ಹೇಳಿದೆ.

Join Whatsapp