ಮಾಜಿ ಸೇನಾಧಿಕಾರಿ ಸೇರಿ ಆರು ಮಂದಿಗೆ ಮರಣದಂಡನೆ ವಿಧಿಸಿದ ಬಾಂಗ್ಲಾದೇಶ ನ್ಯಾಯಾಲಯ

Prasthutha|

ಢಾಕಾ: ಐದು ವರ್ಷಗಳ ಹಿಂದೆ ಇಬ್ಬರು ಎಲ್.ಜಿ.ಬಿ.ಟಿ.ಕ್ಯೂ ಕಾರ್ಯಕರ್ತರ ಹತ್ಯೆಗೆ ಸಂಬಂಧಿಸಿದಂತೆ ಬಾಂಗ್ಲಾದೇಶದ ನ್ಯಾಯಾಲಯವು ನಿಷೇಧಿತ ಗುಂಪಿನ ಆರು ಸದಸ್ಯರಿಗೆ ಮರಣದಂಡನೆ ವಿಧಿಸಿದೆ ಮತ್ತು ಇಬ್ಬರನ್ನು ಖುಲಾಸೆಗೊಳಿಸಿದೆ.

ಕಳೆದ ವರ್ಷ ಬಾಂಗ್ಲಾ ಸರ್ಕಾರದ ನಿಷೇಧಕೊಳಗಾದ ಅನ್ಸಾರ್ ಅಲ್ ಇಸ್ಲಾಮ್ ಗೆ ಸೇರಿದ ಇಬ್ಬರು ಏಪ್ರಿಲ್ 25, 2016 ರಲ್ಲಿ ರಾಜಧಾನಿ ಢಾಕಾದ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಇಬ್ಬರನ್ನು ಕತ್ತರಿಸಿ ಕೊಂದು ಹಾಕಿದ್ದರು. ನಿಷೇಧಿತ ಅನ್ಸಾರ್ ಅಲ್ ಇಸ್ಲಾಮ್ ಅಲ್ – ಖೈದಾ ಗುಂಪಿನ ಸ್ಥಳೀಯ ಅಂಗಸಂಸ್ಥೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಈ ಘಟನೆಗೆ ಸಂಬಂಧಿಸಿದಂತೆ ಮಂಗಳವಾರ ಬಿಗಿ ಭದ್ರತೆಯ ನಡುವೆ ವಿಶೇಷ ನ್ಯಾಯಮಂಡಳಿಯ ನ್ಯಾಯಧೀಶರಾದ ಎಮ್.ಡಿ ಮಜೀಬುರ್ ರಹ್ಮಾನ್ ಅವರು ಆರು ಆರೋಪಿಗಳ ವಿರುದ್ಧ ತೀರ್ಪನ್ನು ಪ್ರಕಟಿಸಿ ಮರಣದಂಡನೆ ವಿಧಿಸಿದರು. ಮರಣದಂಡನೆಗೆ ಒಳಗಾದವರಲ್ಲಿ ಸೇನೆಯ ಮಾಜಿ ಅಧಿಕಾರಿ ಸೈಯದ್ ಜಿಯಾವುಲ್ ಹಕ್ ಒಳಗೊಂಡಿದ್ದಾರೆಂದು ಹೇಳಲಾಗುತ್ತಿದೆ. ಪ್ರಕರಣದ ಇತರ ಐದು ಅಪರಾಧಿಗಳೆಂದರೆ ಅಕ್ರಮ್ ಹುಸೈನ್, ಎಂಡಿ ಮುಝಮ್ಮಿಲ್ ಹುಸೈನ್ ಅಲಿಯಾಸ್ ಸೈಮನ್, ಎಂಡಿ ಶೇಖ್ ಅಬ್ದುಲ್ಲಾ, ಅರಾಫತ್ ರೆಹಮಾನ್ ಮತ್ತು ಅಸಾದುಲ್ಲಾ. ಅದೇ ರೀತಿ ಸಬ್ಬಿರುಲ್ ಹಕ್ ಚೌಧರಿ, ಜುನೇದ್ ಅಹ್ಮದ್ ಅವರನ್ನು ಈ ಪ್ರಕರಣದಿಂದ ಖುಲಾಸೆ ಗೊಳಿಸಲಾಗಿದೆ.

- Advertisement -