ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಮಧ್ಯೆ ಮೂಲಸೌಕರ್ಯ ಕುಸಿತಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿದೆ. ಇದನ್ನು ತಣಿಸಲು ವಲಸಿಗರ ವಿಷಯವನ್ನು ಮುನ್ನೆಲೆಗೆ ತಂದ ಸಂಘಪರಿವಾರ ಪ್ರೇರಿತ ಸಾಮಾಜಿಕ ಮಾಧ್ಯಮಗಳ ಮೂಲಕ ಜನರ ಬೇರೆಡೆಗೆ ಗಮನ ಸೆಳೆಯಲು ಯತ್ನಿಸಲಾಗುತ್ತಿದೆ.
ಭಾರತದ ಸಿಲಿಕಾನ್ ನಗರವೆಂದೇ ಪ್ರಖ್ಯಾತಿ ಹೊಂದಿದ ಬೆಂಗಳೂರು ಮಳೆಯ ಸಂಕಷ್ಟದಿಂದ ಬಳಲುತ್ತಿರುವಾಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್’ಗಳ ಮಧ್ಯೆ ವಲಸಿಗರನ್ನು ನಗರದಿಂದ ಖಾಲಿ ಮಾಡಿಸುವ ವಿಷಯವನ್ನು ಪ್ರಧಾನ ಚರ್ಚಾ ವಿಷಯವಾಗಿ ಮಾಡುವ ಯತ್ನ ನಡೆಯುತ್ತಿದೆ. ಇದೀಗ ನೆಟ್ಟಿಗರ ಚರ್ಚೆಯು ಅಪಾಯಕಾರಿ ಹಂತ ತಲಪಿದ್ದು, ಮೂಲಸೌಕರ್ಯದ ವೈಫಲ್ಯವನ್ನು ಮರೆಮಾಚಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಟ್ವಿಟ್ಟರ್’ನಲ್ಲಿ #LeaveBengalurua, #GetLostMigrants, #Bengaluru_nammadu ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ. ಈ ಮಧ್ಯೆ ವಿರಾಟ್ ರಾಕಿ ಎಂಬಾತ ಬೆಂಗಳೂರನ್ನು ವಲಸಿಗ ಮನಸ್ಸು ಎಂದು ಟೀಕಿಸಿದ್ದಾರೆ ಮತ್ತು ಅಲ್ಲಿನ ನಿವಾಸಿಗಳನ್ನು ಇಬ್ಬಗೆ ನೀತಿಯ ಜನರು ಎಂದು ಕರೆದಿದ್ದಾರೆ.
ಬೆಂಗಳೂರು ನಮ್ಮ ನಗರ, ನಿಮ್ಮದಲ್ಲ. ದಯವಿಟ್ಟು ನಿಮ್ಮ ಸ್ವ-ಗ್ರಾಮಕ್ಕೆ ಹಿಂತಿರುಗಿ. ವಲಸಿಗರೇ ಕೇಳಿ, ನಿಮ್ಮ ಬ್ರೆಡ್ ಮತ್ತು ಬೆಣ್ಣೆಯನ್ನು ಪಡೆಯಲು ನೀವು ಬೆಂಗಳೂರಿನಲ್ಲಿದ್ದೀರಿ. ನಿಮ್ಮ ಕೆಲಸಕಾರ್ಯವನ್ನು ಪೂರ್ತಿಗೊಳಿಸಿ ಮತ್ತು ಇಲ್ಲಿಂದ ತೊಳಗಿರಿ ಎಂಬ ಟ್ವಿಟ್ಟರ್ ಪೋಸ್ಟ್ ಆಗಿದೆ.
ಇದು ಸರ್ಕಾರಕ್ಕೆ ತೆರಿಗೆ ಪಾವತಿಸುವ ಕರ್ಮದ ಫಲವಾಗಿದೆ. ಉತ್ತಮ ಮೂಲಸೌಕರ್ಯವನ್ನು ಮರೆಯಿರಿ. ಮೂಲಸೌಕರ್ಯವನ್ನು ಒದಗಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ವರ್ತುಲ ರಸ್ತೆಯಲ್ಲಿರುವ ಗ್ಲೋಬಲ್ ಟೆಕ್ನಾಲಜಿ ಉದ್ಯಾನವನ ಸಂಪೂರ್ಣ ಜಲಾವೃತಗೊಂಡಿರುವುದನ್ನು ಉಲ್ಲೇಖಿಸಿ ಮತ್ತೊಂದು ಪೋಸ್ಟ್ ಮಾಡಲಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರಲು ಸಾಧ್ಯವಿಲ್ಲ ಎಂದು ಹೇಳುವವರು ಇಲ್ಲಿಗೆ ಬರಬಾರದು. ಇಲ್ಲಿಗೆ ಬಂದು ನೆಲೆಸುವಂತೆ ಯಾರೂ ನಿಮ್ಮನ್ನು ಆಹ್ವಾನ ನೀಡಿಲ್ಲ ಎಂದು ತೋಟಗಾರಿಕ ಸಚಿವ ವಿ. ಮುನಿರತ್ನ ಅವರ ಟ್ರೋಲ್’ಗಳನ್ನು ಗುರಿಯಾಗಿಸಿಕೊಂಡಿದ್ದಾರೆ.
ಬೆಂಗಳೂರಿನ ಕುರಿತು ಅವಹೇಳನಕಾರಿ ಮಾತನಾಡುವವರು ಕೀಳು ಸಂಸ್ಕೃತಿಗೆ ಸೇರಿದವರು. ಅವರಿಗೆ ಅನ್ನ, ವಸತಿ ಮತ್ತು ಜೀವನೋಪಾಯ ನೀಡಿದ ನಗರದ ಕುರಿತು ಕೆಟ್ಟದಾಗಿ ಮಾತನಾಡುವುದು ಸರಿಯಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಈ ಮಧ್ಯೆ ಸರ್ಕಾರ ಸರಿಯಾದ ಮೂಲಸೌಕರ್ಯವನ್ನು ಖಾತ್ರಿಪಡಿಸದಿದ್ದರೆ ನಾವು ಹೊಸ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವುದಾಗಿ ಇನ್ಫೋಸಿಸ್’ನ ಮಾಜಿ ನಿರ್ದೇಶಕ, ಉದ್ಯಮಿ ಮೋಹನ್ ದಾಸ್ ಪೈ ಮತ್ತು ಔಯರ್ ರಿಂಗ್ ರೋಡ್ ಕಂಪೆನಿಗಳ ಅಸೋಸಿಯೇಷನ್ (ORRCA) ಸೇರಿದಂತೆ ಟೆಕ್ ವಿಭಾಗವು ಸರ್ಕಾರಕ್ಕೆ ಎಚ್ಚರಿಸಿತ್ತು.