ಮುಂಬೈಯ ‘ಕರಾಚಿ’ ಸ್ವೀಟ್ಸ್ ಅಂಗಡಿ ಹೆಸರು ಬದಲಿಸಲು ಶಿವಸೇನೆ ನಾಯಕನ ಒತ್ತಡ | ವೀಡಿಯೊ ವೈರಲ್

Prasthutha: November 19, 2020

ಮುಂಬೈ : ಹೆಸರಲ್ಲೇನಿದೆ ಅಂತೀರಾ? ಮುಂಬೈಯಲ್ಲಿ ಶಿವಸೇನೆಯವರಿಗೆ ಹೆಸರಿನ ರಾಜಕಾರಣವೂ ದೊಡ್ಡ ಲಾಭವನ್ನೇ ತರುತ್ತದೆ. ಮುಂಬೈಯ ಬಾಂದ್ರಾದ ಕರಾಚಿ ಸ್ವೀಟ್ಸ್ ಅಂಗಡಿ ಹೆಸರನ್ನು ಬದಲಾಯಿಸುವಂತೆ ಶಿವಸೇನಾ ನಾಯಕ ನಿತಿನ್ ಮಧುಕರ್ ನಂದಗಾಂವ್ಕರ್ ಒತ್ತಾಯಿಸಿರುವ ವೀಡಿಯೊವೊಂದು ವೈರಲ್ ಆಗಿದೆ.

ಕರಾಚಿ ಪಾಕಿಸ್ತಾನ ಮೂಲದ್ದಾದುದರಿಂದ ಆ ಹೆಸರನ್ನಿಟ್ಟಿರುವುದಕ್ಕೆ ಅಂಗಡಿ ಮಾಲಕನಿಗೆ ಶಿವಸೇನೆ ನಾಯಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ಮತ್ತು ಭಯೋತ್ಪಾದಕರಿಗೆ ಸಂಬಂಧಿಸಿದ ಆ ಹೆಸರನ್ನು ತಾನು ಎಷ್ಟು ದ್ವೇಷಿಸುವುದಾಗಿ ನಂದಗಾಂವ್ಕರ್ ಹೇಳುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ.

ಭಾರತ ವಿಭಜನೆಯ ಬಳಿಕ ತನ್ನ ಹಿರಿಯರು ಕರಾಚಿಯಿಂದ ಬಂದ ನೆನಪಿಗಾಗಿ ಈ ಹೆಸರಿಟ್ಟಿದ್ದಾರೆ ಎಂದು ಅಂಗಡಿ ಮಾಲಕ ಹೇಳಲು ಹೋದಾಗ, ನೀವು ಕರಾಚಿ ಬಿಟ್ಟು ಬೇರೇನಾದರೂ ಹೆಸರು ಬದಲಿಸಿಕೊಳ್ಳಿ ಎಂದು ನಂದಗಾಂವ್ಕರ್ ಒತ್ತಾಯಿಸಿದ್ದಾರೆ.

ಪಾಕಿಸ್ತಾನದ ಕರಾಚಿಗೂ ತಮಗೂ ಈಗ ಯಾವುದೇ ನಂಟಿಲ್ಲ ಎಂದು ಅಂಗಡಿ ಮಾಲಕ ಸ್ಪಷ್ಟಪಡಿಸಿದ್ದಾರೆ. ಆದರೆ, ಇದಕ್ಕೆ ಒಪ್ಪದ ನಂದಗಾಂವ್ಕರ್, ಹೆಸರು ಬದಲಿಸಲು ತಗಲುವ ವೆಚ್ಚ ಸೇರಿದಂತೆ ಯಾವುದೇ ಸಹಾಯ ಬೇಕಾದಲ್ಲಿ ಒದಗಿಸುವುದಾಗಿ ತಿಳಿಸಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!