ಕೇರಳದ ಕಮ್ಯುನಿಸ್ಟ್ ಪಾರ್ಟಿ ಕಾರ್ಯಕರ್ತರ ಜಾತಿ ಆಧಾರಿತ ದೌರ್ಜನ್ಯಕ್ಕೆ ಬೇಸತ್ತು ಇಸ್ಲಾಂಗೆ ಮತಾಂತರಗೊಳ್ಳಲು ಚಿಂತಿಸುತ್ತಿರುವ ದಲಿತ ಯುವತಿ

Prasthutha|

ಕಣ್ಣೂರು : ಕೇರಳದ ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಕಾರ್ಯಕರ್ತರ ಕಿರುಕುಳ ಮತ್ತು ದೌರ್ಜನ್ಯವನ್ನು ಸಹಿಸಲಾಗದೆ, ದಲಿತ ಯುವತಿಯೊಬ್ಬರು ಇಸ್ಲಾಂಗೆ ಮತಾಂತರವಾಗುವುದಾಗಿ ಹೇಳಿದ್ದಾರೆ ಎಂದು ‘ದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್’ ವರದಿ ಮಾಡಿದೆ.

ಚಿತ್ರಲೇಖ ಎಂಬ ಯುವತಿ ಕಮ್ಯುನಿಸ್ಟ್ ಪಾರ್ಟಿ ಕಾರ್ಯರ್ತರ ಜಾತಿ ಆಧಾರಿತ ದೌರ್ಜನ್ಯದಿಂದ ಬೇಸತ್ತಿರುವುದಾಗಿ ಆಪಾದಿಸಿದ್ದಾರೆ. ತನಗೆ ನೀಡಲಾದ ಕಿರುಕುಳದಿಂದ ತಾನು ತನ್ನ ಊರು ಪಯ್ಯನ್ನೂರನ್ನು ತೊರೆದು, ಕಣ್ಣೂರಿನ ಕಟ್ಟಂಪಳ್ಳಿಯಲ್ಲಿ ನೆಲೆಸುವಂತಾಗಿದೆ ಎಂದು ಅವರು ಹೇಳಿದ್ದಾರೆ.

- Advertisement -

ತನ್ನ ಗ್ರಾಮ ತೊರೆದ ಬಳಿಕವೂ ತನಗೆ ಕಿರುಕುಳ ನಿಂತಿಲ್ಲ ಎಂದು ಯುವತಿ ತನ್ನ ಫೇಸ್ ಬುಕ್ ಪೋಸ್ಟ್ ನಲ್ಲಿ ಆಪಾದಿಸಿದ್ದಾರೆ.

ಜೀವನೋಪಾಯಕ್ಕಾಗಿ ಚಿತ್ರಲೇಖ ಆಟೊ ಓಡಿಸುತ್ತಾರೆ. 2005ರಲ್ಲಿ ಕಮ್ಯುನಿಸ್ಟ್ ಪಾರ್ಟಿ ಕಾರ್ಯಕರ್ತರು ತಮ್ಮ ಆಟೊಗೆ ಬೆಂಕಿ ಹಚ್ಚಿದ್ದರು. ಆಟೊ ಖರೀದಿಸಿ ಒಂದು ವರ್ಷವಷ್ಟೇ ಆಗಿತ್ತು ಎಂದು ಚಿತ್ರಲೇಖ ಹೇಳಿದ್ದಾರೆ.

ಇಸ್ಲಾಂ ಧರ್ಮವನ್ನು ಸ್ವೀಕರಿಸುವುದಕ್ಕೆ ಮೊದಲು ತಾನು ಅದರ ಬಗ್ಗೆ ಅಧ್ಯಯನ ಮಾಡಲಿದ್ದೇನೆ. ಇಸ್ಲಾಂ ಸ್ವೀಕರಿಸುವ ಬಗ್ಗೆ ಸ್ಪಷ್ಟ ನಿರ್ಧಾರ ಇನ್ನಷ್ಟೇ ಕೈಗೊಳ್ಳಬೇಕಾಗಿದೆ.

ತನ್ನ ಮೇಲೆ ‘ಲವ್ ಜಿಹಾದ್’ ಆರೋಪ ಹೊರಿಸಿ ಕಿರುಕುಳ ನೀಡುತ್ತಿರುವ ಜನರಿಗೆ ಅವರು ಎಚ್ಚರಿಕೆಯನ್ನೂ ನೀಡಿದ್ದಾರೆ.  

- Advertisement -