ಮಡಿಕೇರಿ : ಪ್ರತಿಷ್ಠಿತ ಬನವಾಸಿ‌ ಕನ್ನಡಿಗ ಪ್ರಶಸ್ತಿಗೆ ಭಾಜನರಾದ ಕೊಡಗಿನ‌ ಮೂವರು ಸಾಧಕರು

Prasthutha|

ಮಡಿಕೇರಿ : ಪ್ರತಿಷ್ಠಿತ ಬನವಾಸಿ‌ ಕನ್ನಡಿಗ ಪ್ರಶಸ್ತಿಗೆ ಕೊಡಗಿನ‌ ಮೂವರು ಸಾಧಕರು ಭಾಜನಾಗಿದ್ದಾರೆ. ಕೊಡಗಿನ ಸಾಹಿತಿ ಭಾರದ್ವಾಜ ಕೆ.ಆನಂದತೀರ್ಥ, ಹೆಚ್. ಆರ್. ವಿನು ಹಾಗೂ ಆರತಿ ಪ್ರತಿಷ್ಠಿತ “ಬನವಾಸಿ‌ ಕನ್ನಡಿಗ” ಪ್ರಶಸ್ತಿಗೆ ಭಾಜನಾಗಿದ್ದಾರೆ.

- Advertisement -

ಭಾರದ್ವಾಜರ ಎಂ.ಎ
ಹಿರಿಯ ಸಾಹಿತಿಯಾಗಿರುವ ಭಾರದ್ವಾಜರ ಎಂ.ಎ ನೆನಪುಗಳು ಮಾಸುವ ಮುನ್ನ, ನೀರು ನುಗ್ಗಿದ ಮೇಲೆ, ಸೇರಿದಂತೆ ಅನೇಕ ಕೃತಿಗಳು ಪ್ರಕಟಿತಗೊಂಡಿದೆ. ಅಲ್ಲದೇ ಹಿರಿಯ ಪತ್ರಕರ್ತರಾಗಿರುವ ಅವರು ರಾಜ್ಯದ ಹಲವು ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಆರತಿ
ಆರತಿ ಮೂಲತ ಕೊಡಗಿನವರಾಗಿದ್ದು ಪ್ರಸ್ತುತ ಹೊಸಪೇಟೆಯಲ್ಲಿ ವಾಸಿಸುತ್ತಿದ್ದಾರೆ. ಜಿಲ್ಲೆಯಲ್ಲಿ‘ಸಾಧ್ಯ’ ಎನ್ನುವ ವಿಶೇಷ ಚೇತನ ಮಕ್ಕಳ ಶಾಲೆಯನ್ನು ನಡೆಸುತ್ತಿದ್ದಾರೆ. ಈ ಸೇವೆಗೆ ಆರತಿ ಅವರನ್ನು ಗುರುತಿಸಿ ಬಸವಾಸಿಕನ್ನಡಿಗ ಪ್ರಶಸ್ತಿ ಒಲಿದು ಬಂದಿದೆ.

- Advertisement -

ಹೆಚ್. ಆರ್. ವಿನು
ವೃತ್ತಿಪರ ಟಿ.ವಿ ಹಾಗು ಎಲೆಕ್ಟ್ರಾನಿಕ್ ಮೆಕಾನಿಕ್ ಆಗಿರುವ ಹೆಚ್. ಆರ್. ವಿನು ಸಮಾಜ ಸೇವೆ ಕ್ಷೇತ್ರದಲ್ಲಿ ಬನವಾಸಿ‌ ಕನ್ನಡಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸ್ಥಳೀಯ ಅನಾಥಾಲಯ, ವೃದ್ಧಾಶ್ರಮದೊಡನೆ ನಿಕಟ ಸಂಪರ್ಕದಲ್ಲಿರುವ ಇವರು ತಮ್ಮ ಪುಟ್ಟ ತಂಡ ರಂಚಿಸಿಕೊಂಡಿದ್ದಾರೆ. ರಸ್ತೆ ಬದಿ ಕಾಣುವ ಮಾನಸಿಕ ರೋಗಿಗಳನ್ನು ಹಾಗು ಅನಾಥರಿಗೆ ನೆರವಾಗುವ ಇವರನ್ನು ಬಸವಾಸಿಕನ್ನಡಿಗ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.



Join Whatsapp