ಬಾಬರಿ ಮಸ್ಜಿದ್ ಕೆಡವಿದವರಿಗೆ ಶಿಕ್ಷೆ ಯಾವಾಗ ? ವೆಲ್ಫೇರ್ ಪಾರ್ಟಿ ಪ್ರಶ್ನೆ

Prasthutha: December 5, 2021

ಬೆಂಗಳೂರು : ಬಾಬರಿ ಮಸ್ಜಿದ್ ಕೆಡವಿದ ಧೂರ್ತರು ಹಾಗೂ ಆ ಘಟನೆಗೆ ಕಾರಣರಾದವ ರಿಗೆ ಶಿಕ್ಷೆ ಯಾವಾಗ ಎಂದು ವೆಲ್ಫೇರ್ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಧ್ಯಕ್ಷರಾದ ತಾಹೀರ್ ಹುಸೇನ್ ಪ್ರಶ್ನಿಸಿದ್ದಾರೆ. ಬಾಬರಿ ಕೆಡವಿ 29 ವಷ೯ಗಳು ಕಳೆದರು ಈವರೆಗೂ ಬಾಬ್ರಿ ಮಸೀದಿ ಧ್ವಂಸ ಗೊಳಿಸಿದವರಿಗೆ ಮತ್ತು ಅದನ್ನು ಪ್ರಚೋದಿಸಿದವರಿಗೆ ಶಿಕ್ಷೆ ಆಗಿಲ್ಲ, ಸಿಬಿಐ ದೇಶದ ಮುಸ್ಲಿಂ ನಾಗರಿಕರಿಗೆ ನ್ಯಾಯ ಕೊಡಲು ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ.

ಸಂವಿಧಾನದ ಸಂರಕ್ಷಣೆ ಮತ್ತು ಮುಸ್ಲಿಮರು ಸೇರಿದಂತೆ ಎಲ್ಲಾ ನಾಗರಿಕರಿಗೆ ನ್ಯಾಯವನ್ನು ಖಾತರಿಪಡಿಸುವ ಗೌರವಾನ್ವಿತ ನ್ಯಾಯಾಲಯವು ಬಾಬರಿ ಮಸೀದಿ ವಿಷಯ ದಲ್ಲಿ ವಿಚಿತ್ರ ತೀರ್ಪನ್ನು ನೀಡಿತು. ಬಾಬರಿ ಮಸೀದಿಯನ್ನು ಕೆಡವಿದವರ ಬಗ್ಗೆ ಸ್ಪಷ್ಟತೆ ಇದ್ದರೂ ಕೂಡಾ ವೀಕ್ಷಣೆ ಮತ್ತು ತೀರ್ಮಾನವು ಹೊಂದಿಕೆಯಾಗಲಿಲ್ಲ, ಮತ್ತು ಸಿಬಿಐ ಪಂಜರದ ಗಿಳಿಯಂತೆ ವರ್ತಿಸಿದೆ ಮತ್ತು ಮುಕ್ತ ಮತ್ತು ನ್ಯಾಯಯುತ ತನಿಖೆ ನಡೆಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ಬಾಬ್ರಿ ಮಸೀದಿ ಕೆಡವಿರುವುದು ಒಂದು ಕ್ರಿಮಿನಲ್ ಕೃತ್ಯ ಎಂದು ಸ್ವತಹ ನ್ಯಾಯಾಲಯ ಹೇಳಿದೆ, ಆದರೂ ಕೂಡ ಇನ್ನೂ ತನಕ ತಪ್ಪಿ ಸ್ಥರಿಗೆ ಶಿಕ್ಷೆಯಾಗಿಲ್ಲ, ಆದಷ್ಟು ಬೇಗ ತಪ್ಪಿಸ್ಥರಿಗೆ ಶಿಕ್ಷೆಯಾಗಬೇಕು ಎಂದು ಅವರು ಆಗ್ರಹಿಸಿದರು.

ಅಲ್ಲದೇ ಡಿಸೆಂಬರ್ 6 ರಂದು ವಿಚಾರ ಗೋಷ್ಠಿ , ವಿಚಾರ ಸಂಕಿರಣ, ಪ್ರತಿಭಟನಾ ಪ್ರದರ್ಶನಗಳನ್ನು ವೆಲ್ಫೇರ್ ಪಕ್ಷವು ನಡೆಸಲಿದೆ. ಮತ್ತು ಉನ್ನತ ನ್ಯಾಯಾಲಯದಲ್ಲಿ ಸಿಬಿಐ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಲು ಸಿಬಿಐಗೆ ನಿರ್ದೇಶನ ನೀಡುವಂತೆ ಕೋರಿ ಭಾರತದ ರಾಷ್ಟ್ರಪತಿಗೆ ಮನವಿ ಪತ್ರವನ್ನು ಸಲ್ಲಿಸುತ್ತೇವೆ ಎಂದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!