PFI ನಿಷೇಧ: ದೇಶದೆಲ್ಲೆಡೆ ಪೊಲೀಸರ ಕಟ್ಟೆಚ್ಚರ

Prasthutha|

ಶಾಹೀನ್ ಬಾಗ್’ನಲ್ಲೂ ಬಿಗಿ ಭದ್ರತೆ, ಡ್ರೋನ್ ಬಳಕೆ

- Advertisement -

ನವದೆಹಲಿ: ದೇಶಾದ್ಯಂತ PFI ಸಹಿತ 8 ಸಹ ಸಂಘಟನೆಗಳಿಗೆ ಕೇಂದ್ರ ಸರ್ಕಾರ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಹಲವು ಕಡೆಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ರಾಷ್ಟ್ರ ರಾಜಧಾನಿಯ ಶಾಹೀನ್ ಬಾಗ್ ನಲ್ಲಿರುವ PFI ಕೇಂದ್ರೀಯ ಕಚೇರಿಯ ಹೊರಗೆ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.

ಇಂದು ಮುಂಜಾನೆ PFI ಮತ್ತು ಅದರ ಸಹ ಸಂಘಟನೆಗಳ ಮೇಲೆ ಕೇಂದ್ರ ಸರ್ಕಾರ ಐದು ವರ್ಷಗಳ ಅವಧಿಗೆ ನಿಷೇಧ ಹೇರಿದೆ. ಕೇಂದ್ರ ಸರ್ಕಾರದ ಈ ಕ್ರಮದಿಂದ ದೇಶದೆಲ್ಲೆಡೆ ಅಹಿತಕರ ಘಟನೆಯನ್ನು ತಡೆಯುವ ನಿಟ್ಟಿನಲ್ಲಿ ಶಾಹೀನ್ ಬಾಗ್ ನ ಸುತ್ತಮುತ್ತಲು ಕಣ್ಣಿಡಲು ಡ್ರೋನ್ ಬಳಸುತ್ತಿದ್ದು, PFI ಕಚೇರಿಯ ಸುತ್ತಮುತ್ತ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ.

- Advertisement -

PFI ಅಂಗಸಂಸ್ಥೆಗಳಾದ ರಿಹಾಬ್ ಇಂಡಿಯಾ ಫೌಂಡೇಶನ್ (RIF), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (AIIC), ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ (NCHRO), ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ಕೇರಳದ ರಿಹಬ್ ಫೌಂಡೇಶನ್ ಗಳ ಮೇಲೆ UAPA ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ನಿಷೇಧ ಹೇರಿದೆ.



Join Whatsapp