ಬಜಪೆ ಚತುಷ್ಪಥ ಮುಖ್ಯ ರಸ್ತೆ ಕಳಪೆ: ನಾಗರಿಕ ಸಂರಕ್ಷಣಾ ವೇದಿಕೆಯ ಮನವಿಗೆ ಸ್ಪಂದಿಸಿದ ಲೋಕೋಪಯೋಗಿ ಇಲಾಖೆ

Prasthutha|

ಬಜಪೆ: ಬಜಪೆ ಚತುಷ್ಪಥ ಮುಖ್ಯ ರಸ್ತೆ ಕಳಪೆ ಹಾಗೂ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಲೋಕೋಪಯೋಗಿ ಇಲಾಖೆಗೆ ಮಾಡಿದ ಮನವಿ ಹಾಗೂ ಕಾಮಗಾರಿ ತಡೆದು ನಡೆಸಿದ ಪ್ರತಿಭಟನೆಗಳಿಗೆ ಸ್ಪಂದನೆ ಸಿಕ್ಕಿದ್ದು, ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ನಾಗರಾಜ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ.  ಅವರು ಸ್ಥಳ ಪರಿಶೀಲನೆ ನಡೆಸಿ ಕಳಪೆ ಹಾಗೂ ಅವೈಜ್ಞಾನಿಕತೆಯಿಂದ ಕೂಡಿದ ರಸ್ತೆಯನ್ನು ಪರಿಶೀಲಿಸಿ ಸೂಕ್ತ ರೀತಿಯಲ್ಲಿ ವ್ಯವಸ್ಥೆ ಮಾಡಿ ಕೊಡುತ್ತೇವೆ ಎಂದು ನಾಗರಿಕ ಸಂರಕ್ಷಣಾ ವೇದಿಕೆಗೆ ಭರವಸೆ ನೀಡಿದ್ದಾರೆ.

- Advertisement -

ಇದೇ ಸಂಧರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಮತ್ತೋರ್ವ ಇಂಜಿನಿಯರ್ ಶ್ರೀಧರ್ ಸ್ಥಳದಲ್ಲೇ ಇದ್ದು, ಅವರ ಉಡಾಫೆ ಹಾಗೂ ಸೂಕ್ತ ರೀತಿಯಲ್ಲಿ ಸ್ಪಂದಿಸದೇ ಇರುವುದನ್ನು ವಿರೋಧಿಸಿ ಅವರ ವಿರುದ್ಧ ನಾಗರಿಕರು ಘೋಷಣೆಗಳನ್ನು ಕೂಗಿದ ಘಟನೆಯೂ ನಡೆಯಿತು.

ನಾಗರಿಕ ಸಂರಕ್ಷಣಾ ವೇದಿಕೆಯ ಸಂಚಾಲಕ ಸಿರಾಜ್ ಬಜ್ಪೆ , ನಾವು ಕಳೆದ ಒಂದು ತಿಂಗಳಿನಿಂದ ಸಂಬಂಧಿಸಿದ ಅಧಿಕಾರಿಗಳಿಗೆ ನಿರಂತರ ಮನವಿ ಹಾಗೂ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದೆವು. ಅದರ ಭಾಗವಾಗಿ ಲೋಕೋಪಯೋಗಿ ಇಲಾಖೆಯ ಸೀನಿಯರ್ ಇಂಜಿನಿಯರ್ ಭೇಟಿಕೊಟ್ಟು ನಾಗರಿಕ ಸಮಿತಿಯ ಬೇಡಿಕೆಯಂತೆ ರಸ್ತೆ ಕಾಮಗಾರಿ ನಡೆಸಿಕೊಡುತ್ತೇವೆ ಎಂದು ವಾಗ್ದಾನ ನೀಡಿದ್ದಾರೆ. ಇದು ಬಜಪೆ ನಾಗರಿಕರ ಯಶಸ್ಸಾಗಿದೆ ಎಂದು ಹೇಳಿದರು.

- Advertisement -

 ಈ ಸಂಧರ್ಭದಲ್ಲಿ ನಾಗರಿಕ ಸಂರಕ್ಷಣಾ ಸಮಿತಿಯ ಸಹ ಸಂಚಾಲಕ ಇಸ್ಮಾಯಿಲ್ ಇಂಜಿನಿಯರ್, ಬಜಪೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಾಹುಲ್ ಹಮೀದ್, ಮಾಜಿ ಉಪಾಧ್ಯಕ್ಷ ಶರೀಫ್, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಸುರೇಂದ್ರ ಪೆರ್ಗಡೆ, ಶೇಖರ್ ಪೂಜಾರಿ, ನಝೀರ್ ಕಿನ್ನಿಪದವು, ಥಾಮಸ್, ಜೋಕಿಂ ಪಿರೇರಾ ಹಾಗೂ ನಾಗರಿಕ ಸಮಿತಿಯ ಸದಸ್ಯರಾದ ಹನೀಫ್ ಹಿಲ್ಟಾಪ್, ಇರ್ಷಾದ್ ಬಜ್ಪೆ, ನಿಸಾರ್ ಕರಾವಳಿ, ಮುಫೀದ್ ರಹ್ಮಾನ್, ಅನ್ವರ್ ಬಜ್ಪೆ, ಹಿರಿಯಾರಾದ ಮೋನಾಕ, ಸಲೀಂ ಹಾಜಿ ಹಾಗೂ ನೂರಾರು ಬಜಪೆಯ ನಾಗರಿಕರು ಉಪಸ್ಥಿತರಿದ್ದರು.

Join Whatsapp