ಮುರುಘಾಶ್ರೀ ವಿರುದ್ಧದ 2ನೇ ಪೋಕ್ಸೋ ಪ್ರಕರಣದಲ್ಲೂ ಜಾಮೀನು ಅರ್ಜಿ ವಜಾ

Prasthutha|

ಚಿತ್ರದುರ್ಗ: ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ 2ನೇ ಪೋಕ್ಸೋ ಕೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾಶ್ರೀ ಜಾಮೀನು ಅರ್ಜಿ ವಜಾಗೊಂಡಿದೆ.

- Advertisement -

ಎರಡನೇ ಪೋಕ್ಸೋ ಪ್ರಕರಣದಲ್ಲಿ ಡಾ.ಶಿವಮೂರ್ತಿ ಮುರುಘಾ ಶ್ರೀ ಜಾಮೀನು ಅರ್ಜಿ ವಜಾಗೊಳಿಸಿ ನಗರದ  2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ಆದೇಶ ಹೊರಡಿಸಿದೆ.

ಈಗಾಗಲೇ ಮೊದಲನೇ ಪೋಕ್ಸೋ ಪ್ರಕರಣದಲ್ಲಿ ಜೈಲುಪಾಲಾಗಿರುವ ಮುರುಘಾ ಶ್ರೀ ವಿರುದ್ಧ ಅಕ್ಟೋಬರ್ 13ರಂದು 2ನೇ ಫೋಕ್ಸೋ ಕೇಸ್ ದಾಖಲಾಗಿತ್ತು. ಆಗಸ್ಟ್ 26ರಂದು 1ನೇ ಫೋಕ್ಸೋ ಪ್ರಕರಣ ದಾಖಲಾಗಿತ್ತು. ಬಳಿಕ ಮುರುಘಾಶ್ರೀಯನ್ನು ಸೆಪ್ಟೆಂಬರ್ 1ರಂದು ಪೊಲೀಸರು ಬಂಧಿಸಿದ್ದು, ಕಳೆದ 3ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ.

- Advertisement -

ಮತ್ತೊಂದು ಆರೋಪ

ಮುರುಘಾ ಮಠದ ಹಾಸ್ಟೆಲ್​’ನಲ್ಲಿ ವಾಸವಿದ್ದ 22 ಅನಾಥ ಮಕ್ಕಳು ನಾಪತ್ತೆಯಾಗಿರುವ ಗಂಭೀರ ಆರೋಪ ಕೇಳಿಬಂದಿದೆ. ನಾಪತ್ತೆಯಾಗಿರುವವರ ಪೈಕಿ 14 ಹೆಣ್ಣು ಹಾಗೂ 8 ಗಂಡು ಮಕ್ಕಳಿದ್ದಾರೆ. ಅನಾಥ ಮಕ್ಕಳು ಮಠಕ್ಕೆ ಸಿಕ್ಕಿದ್ದು ಹೇಗೆ? ಅನಾಥ ಮಕ್ಕಳನ್ನು ಸಾಕಲು ಸರ್ಕಾರದಿಂದ ಅನುಮತಿ ಪಡೆಯಲಾಗಿತ್ತೇ ಎಂಬ ಪ್ರಶ್ನೆಗಳು ಇದೀಗ ಉದ್ಭವಿಸಿವೆ.

‘ಬಸವ ಕುಟೀರ’ಕ್ಕೆ ಈ ಹಿಂದೆ ಸರ್ಕಾರದಿಂದ ಅನುದಾನ ಸಿಗುತ್ತಿತ್ತು. ಅದರೆ 2012ರಲ್ಲಿ ಈ ಅನುದಾನವನ್ನು ಶಿವಮೂರ್ತಿ ಮುರುಘಾ ಶ್ರೀ ನಿರಾಕರಿಸಿದ್ದರು. ಸರ್ಕಾರದ ಅನುದಾನ ಬಳಕೆ ಮಾಡಿಕೊಳ್ಳದ ಸಂಸ್ಥೆಯ ಬಗ್ಗೆ ಅಧಿಕಾರಿಗಳು ಹೆಚ್ಚು ಗಮನ ನೀಡುತ್ತಿರಲಿಲ್ಲ. ಹೀಗಾಗಿ ಮಕ್ಕಳು ನಾಪತ್ತೆಯಾದ ವಿಚಾರವೂ ತಡವಾಗಿ ಬೆಳಕಿಗೆ ಬಂದಿದೆ.



Join Whatsapp