October 22, 2020

ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ: ಪ್ರವಾದಿ ನಿಂದನೆ ಪೋಸ್ಟ್ ಹಾಕಿದ ಆರೋಪಿ ನವೀನ್ ಗೆ ಜಾಮೀನು

ಬೆಂಗಳೂರು: ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಯಲ್ಲಿ ಗಲಭೆಗೆ ಕಾರಣವಾದ ಪ್ರವಾದಿ ಮುಹಮ್ಮದ್ ರನ್ನು ಅವಹೇಳನ ಮಾಡುವ ವ್ಯಂಗ್ಯ ಚಿತ್ರ ವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ಮಾಡಿದ ಆರೋಪಿ ನವಿನ್ ಗೆ ಏಕ ಸದಸ್ಯ ಪೀಠ ಜಾಮೀನು ನೀಡಿದೆ.

ನವೀನ್ ಗೆ ಪ್ರಾಣ ಬೆದರಿಕೆ ಇರುವುದರಿಂದ ಜಾಮೀನು ನೀಡಬಾರದೆಂದು ಎಸ್.ಪಿ.ಪಿ ವಾದ ಮಂಡಿಸಿದ್ದರು.

ಈ ಕಾರಣಕ್ಕಾಗಿ ಜಾಮೀನು ನಿರಾಕರಿಸುವಂತಿಲ್ಲ. ಫೇಸ್ಬುಕ್ ಪೋಸ್ಟನ್ನು ಆತ ಡಿಲೀಟ್ ಮಾಡಿದ್ದಾನೆ. ಕಠಿಣ ಷರತ್ತಿನ ಮೇರೆಗೆ ಜಾಮೀನು ನೀಡಲಾಗುವುದು. ಮುಂದೆ ಇಂಥಹ ಕೃತ್ಯದಲ್ಲಿ ತೊಡಗಿಸಿಕೊಂಡರೆ ಜಾಮೀನು ಹಿಂದೆಗೆಯಬಹುದಾಗಿದೆ ಎಂದು ನ್ಯಾ.ಬಿ.ಎ.ಪಾಟೀಲ್ ಅವರ ಏಕಸದಸ್ಯ ಪೀಠ ಹೇಳಿದೆ.

ಟಾಪ್ ಸುದ್ದಿಗಳು

ವಿಶೇಷ ವರದಿ