ಸಾಮಾಜಿಕ ಜಾಲತಾಣ ಮೂರ್ಖರು, ಹುಚ್ಚರ ಧ್ವನಿವರ್ಧಕ: ಮಾಜಿ ಗೂಗಲ್ ಸಿಇಒ

Prasthutha|

► ಗೂಗಲ್ ವಿರುದ್ಧ ಅಮೆರಿಕ ನ್ಯಾಯಾಂಗ ಇಲಾಖೆಯಿಂದ ದಾವೆ

ವಾಶಿಂಗ್ಟನ್: ಸಾಮಾಜಿಕ ಮಾಧ್ಯಮಗಳ ‘ಅತಿರೇಕ’ದ ಕಾರಣದಿಂದಾಗಿ ಮುಂಬರುವ ವರ್ಷಗಳಲ್ಲಿ ಇನ್ ಟರ್ನೆಟ್ ಪ್ಲಾಟ್ ಫಾರ್ಮ್ ಗಳ ಮೇಲೆ ಹೆಚ್ಚು ಹೆಚ್ಚು ನಿರ್ಬಂಧಗಳು ಬರುವ ಸಾಧ್ಯತೆಯಿದೆ ಎಂದು ಗೂಗಲ್ ನ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎರಿಕ್ ಶ್ಮಿಟ್ ಹೇಳಿದ್ದಾರೆ.

- Advertisement -

2019ರಲ್ಲಿ ಗೂಗಲ್ ನ ಮಾತೃ ಸಂಸ್ಥೆ ಆಲ್ಫಾಬೆಟ್ ಇಂಕ್. ಅನ್ನು ತೊರೆದಿರುವ ಶ್ಮಿಟ್, ಈಗಲೂ ಅದರ ಷೇರುದಾರರಾಗಿದ್ದಾರೆ. ಕಂಪೆನಿಯ ವಿರುದ್ಧ ಅಮೆರಿಕಾ ಸರಕಾರ ಸಲ್ಲಿಸಿರುವ ನಂಬಿಕೆ ಆಂಟಿ ಟ್ರಸ್ಟ್ ದಾವೆಯು ಸೂಕ್ತವಲ್ಲ. ಆದರೆ ಸಾಮಾನ್ಯವಾಗಿಯೇ ಸಾಮಾಜಿಕ ಜಾಲತಾಣಗಳಿಗಾಗಿ ಇನ್ನೂ ಹೆಚ್ಚಿನ ನಿರ್ಬಂಧಗಳು ಮುಂಬರುವ ದಿನಗಳಲ್ಲಿ ಬರಬಹುದೆಂದು ಅವರು ಅಂದಾಜಿಸಿದ್ದಾರೆ.

“ಸಾಮಾಜಿಕ ಜಾಲತಾಣಗಳ ಸನ್ನಿವೇಶವು  ಮೂರ್ಖರು ಮತ್ತು ಹುಚ್ಚು ಜನರಿಗೆ ಧ್ವನಿವರ್ಧಕವಗಿದೆ. ಹಾಗೆ ಆಗುವುದನ್ನು ನಾವು ಉದ್ದೇಶಿಸಿರಲಿಲ್ಲ” ಎಂದು ಅವರು ವಾಲ್ ಸ್ಟ್ರೀಟ್ ಜರ್ನಲ್ ಬುಧವಾರ ಆಯೋಜಿಸಿದ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದರು. “ಇಂಡಸ್ಟ್ರಿಯು ಇದನ್ನು ಬುದ್ಧಿವಂತಿಕೆಯಿಂದ ನಿಭಾಯಿಸದಿದ್ದರೆ ಇನ್ನಷ್ಟು ನಿರ್ಬಂಧಗಳು ಬೀಳಲಿವೆ” ಎಂದು ಅವರು ಹೇಳಿದರು.

ಆನ್ ಲೈನ್ ಸರ್ಚ್ ಗಳು ಮತ್ತು ಜಾಹೀರಾತು ಮಾರುಕಟ್ಟೆಗಳನ್ನು ಅಕ್ರಮವಾಗಿ ನಿಯಂತ್ರಿಸಿದ ಮತ್ತು ಪ್ರಾಬಲ್ಯ ಮೆರೆದ ಆರೋಪದಲ್ಲಿ ಅಮೆರಿಕಾದ ನ್ಯಾಯಂಗ ಇಲಾಖೆಯು ಗೂಗಲ್ ವಿರುದ್ಧ ಬಹುದೊಡ್ಡ ಆಂಟಿ ಟ್ರಸ್ಟ್ ಮೊಕದ್ದಮೆಯನ್ನು ದಾಖಲಿಸಿದೆ. ಈ ದಾವೆಯಲ್ಲಿ ಅಮೆರಿಕಾದ 11 ರಾಜ್ಯಗಳು ನ್ಯಾಯಾಂಗ ಇಲಾಖೆಯೊಂದಿಗೆ ಕೈಜೋಡಿಸಿದೆ.

ಅಂತರ್ ಜಾಲ ಕ್ಷೇತ್ರದಲ್ಲಿ ತನಗೆ ಎಂದಿಗೂ ಪ್ರತಿಸ್ಪರ್ಧಿಗಳು ಇಲ್ಲದಂತೆ ನೋಡಿಕೊಳ್ಳಲು ಗೂಗಲ್ ಪ್ರಾಬಲ್ಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ದಾವೆಯು ಗೂಗಲ್ ನ ಜಾಹಿರಾತು ಉದ್ಯಮವನ್ನು ಗುರಿಯಾಗಿಸಿಲ್ಲ. ಬದಲಾಗಿ ಸರ್ಚ್ ಇಂಜಿನ್ ನಲ್ಲಿ ತನ್ನ ಜಾಹಿರಾತು ಪಾತ್ರವನ್ನು ಪ್ರಮುಖವಾಗಿ ತೋರಿಸುತ್ತದೆ ಎಂದು ಡೆಪ್ಯುಟಿ ಅಟಾರ್ನಿ ಜನರಲ್ ಜೆಫ್ ರೋಸೆನ್ ಹೇಳಿದ್ದಾರೆ.

- Advertisement -