ಮನಮ : ಕೋವಿಡ್ 19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಹ್ರೇನ್ ನ ಎಲ್ಲಾ ಮಸೀದಿಗಳಲ್ಲಿ ಎರಡು ವಾರಗಳ ಕಾಲ ಎಲ್ಲಾ ಪ್ರಾರ್ಥನೆ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಅಮಾನತು ಮಾಡಲಾಗಿದೆ. ಗುರವಾರ (ಫೆ.11)ದಿಂದ ಈ ಆದೇಶ ಅನ್ವಯವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಶುಕ್ರವಾರದ ಪ್ರಾರ್ಥನೆ ಮತ್ತು ಪ್ರವಚನ ಅಹಮದ್ ಅಲ್ ಫತೇ ಇಸ್ಲಾಮಿಕ್ ಸೆಂಟರ್ ನಿಂದ ನೇರ ಪ್ರಸಾರವಿರಲಿದೆ. ಈ ವೇಳೆ ಕಡಿಮೆ ಸಂಖ್ಯೆಯ ಮಂದಿ ಈ ಪ್ರಾರ್ಥನೆಯಲ್ಲಿ ಭಾಗವಹಿಸಲಿದ್ದಾರೆ.
ಕೋವಿಡ್ 19 ವಿರುದ್ಧ ಹೋರಾಡುತ್ತಿರುವ ರಾಷ್ಟ್ರೀಯ ವೈದ್ಯಕೀಯ ಕಾರ್ಯಪಡೆಯ ಶಿಫಾರಸ್ಸುಗಳು ಮತ್ತು ಇಸ್ಲಾಮಿಕ್ ವ್ಯವಹಾರಗಳ ಉನ್ನತ ಮಂಡಳಿಯ ಅಭಿಪ್ರಾಯದ ಮೇರೆಗೆ ಎರಡು ವಾರಗಳ ಧಾರ್ಮಿಕ ಕಾರ್ಯಕ್ರಮಗಳನ್ನು ಅಮಾನತುಗೊಳಿಸಲಾಗಿದೆ ಎಂದು ನ್ಯಾಯ, ಇಸ್ಲಾಮಿಕ್ ವ್ಯವಹಾರ ಮತ್ತು ಧಾರ್ಮಿಕ ದತ್ತಿ ಸಚಿವಾಲಯ ತಿಳಿಸಿದೆ.