ವಿದೇಶಿ ತಬ್ಲೀಗಿಗಳ ಬಿಡುಗಡೆಗೆ ಜಾರ್ಖಂಡ್ ನ್ಯಾಯಾಲಯ ಆದೇಶ

Prasthutha|

- Advertisement -

ಹೊಸದಿಲ್ಲಿ: ಇಸ್ಲಾಮಿಕ್ ಸಂಘಟನೆಯಾದ ತಬ್ಲೀಗ್ ಜಮಾಅತ್‌ನ 11 ವಿದೇಶಿ ಕಾರ್ಯಕರ್ತರನ್ನು ತಕ್ಷಣ ಬಿಡುಗಡೆ ಮಾಡಲು ಜಾರ್ಖಂಡ್‌ನ ಪೂರ್ವ ಸಿಂಗ್‌ಭೂಮ್ ಜಿಲ್ಲೆಯ ನ್ಯಾಯಾಲಯ ಆದೇಶಿಸಿದೆ. ಆರೋಪಿಗಳ ತಪ್ಪನ್ನು ಸಾಬೀತುಪಡಿಸಲು ಸಾಕ್ಷ್ಯಗಳನ್ನು ಸಲ್ಲಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿರುವುದರಿಂದ ಅವರನ್ನು ತಕ್ಷಣ ಬಿಡುಗಡೆ ಮಾಡಲು ನ್ಯಾಯಾಲಯ ಆದೇಶಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಕೋವಿಡ್ ಹರಡುವುದನ್ನು ತಡೆಗಟ್ಟಲು ಹೊರಡಿಸಲಾದ ಮಾನದಂಡಗಳು ಮತ್ತು ವೀಸಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಅವರನ್ನು 2020ರ ಮಾರ್ಚ್ 24 ರಂದು ಬಂಧಿಸಲಾಗಿತ್ತು. ಬಂಧನದ ನಂತರ ಅವರನ್ನು ಕ್ವಾರಂಟೈನ್‌ನಲ್ಲಿರಿಸಿ ನಂತರ ಏಪ್ರಿಲ್ 7 ರಂದು ಜೈಲಿಗೆ ವರ್ಗಾಯಿಸಲಾಗಿತ್ತು. ಏಪ್ರಿಲ್‌ನಲ್ಲಿ ಬಿಜೆಪಿ ಮತ್ತು ಗೋದಿ ಮಾಧ್ಯಮಗಳು ಸೇರಿದಂತೆ ಬಲಪಂಥೀಯ ಗುಂಪು ತಬ್ಲೀಗ್ ಜಮಾಅತನ್ನು ಗುರಿಯಾಗಿಸಿತ್ತು. ಆದಾಗ್ಯೂ ಭಾರತದಾದ್ಯಂತ ಹಲವಾರು ನ್ಯಾಯಾಲಯಗಳು ತಬ್ಲೀಗಿ ಸದಸ್ಯರ ವಿರುದ್ಧ ದಾಖಲಾದ ಪ್ರಕರಣಗಳನ್ನು ರದ್ದುಗೊಳಿಸಿ ಖುಲಾಸೆಗೊಳಿಸಿದ್ದವು. ವಿದೇಶಿ ತಬ್ಲೀಗಿ ಕಾರ್ಯಕರ್ತರನ್ನು ಕೋವಿಡ್ ಹೆಸರಿನಲ್ಲಿ ಬಲಿಪಶು ಮಾಡಲಾಗಿದೆ ಎಂದು ಬಾಂಬೆ ಹೈಕೋರ್ಟ್ ಒಂದು ಮಹತ್ವದ ತೀರ್ಪಿನಲ್ಲಿ ಹೇಳಿತ್ತು.

Join Whatsapp