ಮೈಲಿಗೆ ಅಂತ ಬಾಣಂತಿ, ಮಗುವನ್ನು ಊರ ಹೊರಗಿಟ್ಟ ಪ್ರಕರಣ : ವಿಪರೀತ ಶೀತದಿಂದ ಮಗು ಸಾವು

Prasthutha|

ತುಮಕೂರು: ಮೈಲಿಗೆ ಎಂದು ಬಾಣಂತಿ ಹಾಗೂ ಮಗುವನ್ನ ಕುಟುಂಬಸ್ಥರು ಊರ ಹೊರಗಿಟ್ಟಿದ್ದರಿಂದ ಮಗು ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟ ದಾರುಣ ಘಟನೆ ಗೊಲ್ಲರಹಟ್ಟಿಯಲ್ಲಿ ನಡೆದಿದೆ.

- Advertisement -

ಶೀತದಿಂದ ಬಳಲುತ್ತಿದ್ದ ಮಗುವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಮೈಲಿಗೆ ಎಂಬ ಕಾರಣದಿಂದ ಬಾಣಂತಿ ಹಾಗೂ ಮಗುವನ್ನು ಕುಟುಂಬಸ್ಥರು ಊರ ಹೊರಗಿಟ್ಟಿದ್ದರು ಎಂದು ತಿಳಿದು ಬಂದಿದೆ.

ವಿಪರೀತ ಗಾಳಿ, ಮಳೆ ಇದ್ದರೂ ಸಹ ಮಗು ಮತ್ತು ತಾಯಿಯನ್ನು ಊರ ಹೊರಗೆ ಇರಿಸಲಾಗಿತ್ತು. ಇದರಿಂದ ಮಗುವಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಗ್ರಾಮದ ಸಿದ್ದೇಶ್ ಮತ್ತು ವಸಂತಾ ದಂಪತಿಯ ಮಗು ಮೃತಪಟ್ಟಿದೆ.  

Join Whatsapp