ಕಟೀಲನ್ನು ಕಾಂಗ್ರೆಸ್ ಅಧ್ಯಕ್ಷ ಮಾಡಿದ ಮಾಜಿ ಸಚಿವ : ಎಡವಟ್ಟು ಮಾಡಿಕೊಂಡ ಬಾಬೂರಾವ್

Prasthutha|

ಯಾದಗಿರಿ: ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಎಡವಟ್ಟಿನಿಂದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕೆಪಿಸಿಸಿ ಅಧ್ಯಕ್ಷರಾದ ಘಟನೆ ಯಾದಗಿರಿಯಲ್ಲಿ ಇಂದು ನಡೆದಿದೆ.

- Advertisement -

ನಳೀನ್ ಕುಮಾರ್ ಕಟೀಲ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರೆಂದು ಬಾಬುರಾವ್ ಚಿಂಚನಸೂರ್ ಬಹಿರಂಗ ಕಾರ್ಯಕ್ರಮದಲ್ಲಿ ಸಂಬೋಧಿಸಿದ್ದು ಚಿಂಚನಸೂರ್ ಎಡವಟ್ಟಿಗೆ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ನಕ್ಕು ಸುಮ್ಮನಾಗಿದ್ದಾರೆ.

ಯಾದಗಿರಿ ನಗರದ ಚಿತ್ತಾಪುರ ರಸ್ತೆಯ ಗ್ರೀನ್ ಪಾರ್ಕ್ ನಲ್ಲಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಸಂಸದರ ಸಮ್ಮುಖದಲ್ಲೇ ಇದು ನಡೆದಿದ್ದು ಆ ಮೇಲೆ ಸ್ವಾರಿ ಎಂದು ಹೇಳಿ ಭಾಷಣ ಮುಂದುವರಿಸಿದ್ದಾರೆ.



Join Whatsapp