ಬಿಜೆಪಿ ಬುಲ್ಡೋಝರ್ ನೀತಿ ಸ್ವತಂತ್ರ ಭಾರತದ ಅತಿದೊಡ್ಡ ವಿನಾಶ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

Prasthutha|

ನವದೆಹಲಿ: ನಗರದ ವಿವಿಧೆಡೆ ನಡೆಯುತ್ತಿರುವ ಅತಿಕ್ರಮಣ ವಿರೋಧಿ ಅಭಿಯಾನವನ್ನು ಟೀಕಿಸಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದಿಲ್ಲಿಯಲ್ಲಿ ಜನರ ಅಂಗಡಿಗಳು ಹಾಗೂ  ಮನೆಗಳನ್ನು ಬಿಜೆಪಿ ಬುಲ್ಡೋಝರ್ ಮಾಡುತ್ತಿರುವ ರೀತಿ ಸರಿಯಲ್ಲ. ಇದು ಸ್ವತಂತ್ರ ಭಾರತದ ಅತಿದೊಡ್ಡ ವಿನಾಶ ಎಂದು ಹೇಳಿದ್ದಾರೆ.

- Advertisement -

ಈ ವಿಷಯದ ಕುರಿತು ಆಮ್ ಆದ್ಮಿ ಪಕ್ಷದ ಶಾಸಕರೊಂದಿಗಿನ ಸಭೆಯಲ್ಲಿ, ಅರವಿಂದ ಕೇಜ್ರಿವಾಲ್ ಅವರು “ದಿಲ್ಲಿಯಲ್ಲಿ  ಅತಿಕ್ರಮಣದ ವಿರುದ್ಧ ಎಂಸಿಡಿ ಬುಲ್ಡೋಝರ್ ಗಳನ್ನು ಓಡಿಸುತ್ತಿದೆ. ಆದರೆ 2 ವಿಷಯಗಳು ಮುಖ್ಯವಾಗಿವೆ. ಒಂದು, ದಿಲ್ಲಿಯ 80 ಶೇಕಡಾ ನಿವಾಸಗಳು ಅತಿಕ್ರಮಣಕ್ಕೆ ಒಳಪಡುತ್ತದೆ. ಎರಡನೆಯದಾಗಿ ಜನರು ತಮ್ಮ ಕಾಗದಪತ್ರಗಳನ್ನು ತೋರಿಸಿದ ನಂತರವೂ ಬುಲ್ಡೋಝರ್ ಗಳನ್ನು ಓಡಿಸಲಾಗುತ್ತಿದೆ. ಇದು ಸರಿಯಲ್ಲ. ದಿಲ್ಲಿಯ ಗುಡಿಸಲು ಮತ್ತು ಕೊಳೆಗೇರಿಗಳನ್ನು ಒಡೆಯಲು ಬಿಜೆಪಿಯವರು ಯೋಜಿಸುತ್ತಿದ್ದಾರೆ ಮತ್ತು 63 ಲಕ್ಷ ಜನರ ಮನೆ ಅಥವಾ ಅಂಗಡಿ ನೆಲಸಮ ವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ದೆಹಲಿಯ ವಿವಿಧ ಭಾಗಗಳಲ್ಲಿ ಬಿಜೆಪಿ ನೇತೃತ್ವದ ಮುನ್ಸಿಪಲ್ ಕಾರ್ಪೊರೇಷನ್ ಗಳು ನಡೆಸುತ್ತಿರುವ ಅತಿಕ್ರಮಣ ವಿರೋಧಿ ಅಭಿಯಾನವನ್ನು ವಿರೋಧಿಸಿ ಜೈಲಿಗೆ ಹೋಗಲು ಪಕ್ಷದ ಕಾರ್ಯಕರ್ತರು ಸಿದ್ಧರಾಗಿರಬೇಕು ಎಂದು ಹೇಳಿದರು.



Join Whatsapp