ಲಕ್ನೊ: ಬಾಬ್ರಿ ಮಸ್ಜಿದ್ ಧ್ವಂಸ ಪ್ರಕರಣಕ್ಕೆ ಒಂದು ದಿನ ಬಾಕಿ ಉಳಿದಿರುವಂತೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಖಾತರಿಪಡಿಸುವಂತೆ ಗೃಹ ಸಚಿವಾಲಯವು ರಾಜ್ಯಗಳನ್ನು ಕೇಳಿಕೊಂಡಿದೆ.
ಕೆಲವು ಸಮಾಜಘಾತುಕ ಶಕ್ತಿಗಳು ತೀರ್ಪಿನ ಹಿನ್ನೆಲೆಯಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಲು ಪ್ರಯತ್ನಿಸುವ ಸಾಧ್ಯತೆ ಇರುವುದರಿಂದ ಸೂಕ್ಷ್ಮ ಪ್ರದೇಶಗಳು ಮತ್ತು ಜಿಲ್ಲೆಗಳಲ್ಲಿ ಹೆಚ್ಚು ಭದ್ರತೆಯನ್ನು ಏರ್ಪಡಿಸಬೇಕು ಎಂದು ಗೃಹ ಸಚಿವಾಲಯ ರಾಜ್ಯಗಳಿಗೆ ಸೂಚಿಸಿದೆ.
ತೀರ್ಪು ನಿರ್ದಿಷ್ಟ ಸಮುದಾಯದ ವಿರುದ್ಧವಾಗಿದ್ದರೆ ಮೂಲಭೂತವಾದಿಗಳು ಎರಡು ಗುಂಪುಗಳ ಜನರ ಮಧ್ಯೆ ಘರ್ಷಣೆಯನ್ನು ಸೃಷ್ಟಿಸಲು ಮತ್ತು ಪೌರತ್ವ ಕಾಯ್ದೆ ವಿರೋಧಿ ಆಂದೋಲನವನ್ನು ಮರುಆರಂಭಿಸಲು ಪ್ರಯತ್ನಿಸುವ ಸಾಧ್ಯತೆಗಳಿದೆ ಎಂದು ಗೃಹಸಚಿವಾಲಯ ಹೇಳಿದೆ.