ಮುಲ್ತಾನ್: ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ 120 ರನ್ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದೆ.
ಮುಲ್ತಾನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅತಿಥೇಯ ಪಾಕಿಸ್ತಾನ ನೀಡಿದ್ದ 276 ರನ್ ಗುರಿ ಹಿಂಬಾಲಿಸಿದ ವೆಸ್ಟ್ ಇಂಡೀಸ್ 32.2 ಓವರ್‌ಗಳಲ್ಲಿ ಕೇವಲ 155 ರನ್ ಗಳಿಸುವಷ್ಟರಲ್ಲೇ ಸರ್ವಪತನ ಕಂಡಿತು. ಈ ಗೆಲುವಿನ ಮೂಲಕ ಪಾಕಿಸ್ತಾನ ಸರಣಿಯನ್ನ ಕೈವಶಪಡಿಸಿಕೊಂಡಿತು.
ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಇನ್ನಿಂಗ್ಸ್ ವೇಳೆ ನಡೆದ ಘಟನೆಯೊಂದು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಎಡಗೈ ಸ್ಪಿನ್ನರ್ ಮುಹಮ್ಮದ್ ನವಾಝ್ ಎಸೆದ 29ನೇ ಓವರ್‌ನ ಮೊದಲ ಎಸೆತವನ್ನು ಸ್ಟೈಕ್‌ನಲ್ಲಿದ್ದ ವೆಸ್ಟ್ ಇಂಡೀಸ್ ಬ್ಯಾಟ ಅಖಿಲ್ ಹೊಸೆನ್ ಮಿಡ್ ಮಿಕೆಟ್ ಕಡೆಗೆ ತಳ್ಳಿ ಒಂಟಿ ರನ್ ಪಡೆದಿದ್ದರು. ಈ ವೇಳೆ ಚೆಂಡನ್ನು ಪಡೆಯಲು ಓಡಿದ ವಿಕೆಟ್ ಕೀಪರ್ ಮುಹಮ್ಮದ್ ರಿಝಾನ್ ತಮ್ಮ ಗೌಸ್ ಅನ್ನು ಕಳಚಿ ಚೆಂಡನ್ನು ಮರಳಿಸಿದ್ದರು. ಆದರೆ ವಿಕೆಟ್ ಹಿಂದೆ ಚೆಂಡನ್ನು ಸ್ವೀಕರಿಸುವ ವೇಳೆ ಪಾಕ್ ನಾಯಕ ಬಾಬರ್ ಆಝಮ್, ಕೀಪರ್ ರಿಝಾನ್ ಕಳಚಿದ್ದ ಗೌಸ್ ಅನ್ನು ಧರಿಸಿದ್ದರು. ಇದನ್ನು ಗಮನಿಸಿದ ಮೈದಾನದ ನಿರ್ಣಾಯಕರು ಆಝಮ್ ನಡೆಗೆ ಅಸಮ್ಮತಿ ಸೂಚಿಸಿದರು. ಇದಲ್ಲದೆ ‘ಅನಧಿಕೃತ ಫೀಲ್ಡಿಂಗ್’ ಎಂದು ನಿರ್ಧರಿಸಿ ಪಾಕಿಸ್ತಾನ ತಂಡಕ್ಕೆ 5 ರನ್’ಗಳ ದಂಡ ವಿಧಿಸಿದರು.
ಕ್ರಿಕೆಟ್ ನಿಯಮ “28.1 ರಕ್ಷಣಾತ್ಮಕ ಸಲಕರಣೆ”ಯ ಪ್ರಕಾರ ಫೀಲ್ಡಿಂಗ್ ವೇಳೆ ತಂಡದ ವಿಕೆಟ್ ಕೀಪರ್ ಹೊರತಾಗಿ ಇನ್ನುಳಿದ ಯಾವುದೇ ಆಟಗಾರ ವಿಕೆಟ್ ಕೀಪಿಂಗ್ ಗೌಸ್ ಅಥವಾ ಬೇರೆ ಯಾವುದೇ ಫೀಲ್ಡರ್ ಲೆಗ್ ಪ್ಯಾಡ್ ಹಾಕಿಕೊಳ್ಳಲು ಅನುಮತಿ ಇರುವುದಿಲ್ಲ. ಆದರೆ, ನಿರ್ಣಾಯಕರ ಅನುಮತಿ ಮೆರೆಗೆ ಕೈ ಅಥವಾ ಬೆರಳುಗಳ ರಕ್ಷಣೆಗೋಸ್ಕರ ಟೇಪ್ ಇನ್ನಿತರು ವಸ್ತುಗಳನ್ನು ಸುತ್ತಿಕೊಳ್ಳಬಹುದು.
ಅದಾಗಿಯೂ, ಬಾಬರ್ ಆಝಮ್ ಫೀಲ್ಡಿಂಗ್‌ನಲ್ಲಿ ಮಾಡಿದ ಎಡವಟ್ಟಿನಿಂದ ಪಾಕಿಸ್ತಾನ ತಂಡಕ್ಕೆ ಯಾವುದೇ ಹಿನ್ನಡೆಯಾಗಲಿಲ್ಲ. 34ನೇ ಓವರ್‌ನಲ್ಲಿಯೇ ವೆಸ್ಟ್ ಇಂಡೀಸ್ ತಂಡ 155 ರನ್ ತಲುಪುವಷ್ಟರಲ್ಲಿ ಸರ್ವ ಪತನ ಕಂಡಿತು. ಆ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕಿಸ್ತಾನ ತಂಡ 2-0 ಮುನ್ನಡೆ ಪಡೆಯಿತು ಹಾಗೂ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿಯನ್ನು ವಶಪಡಿಸಿಕೊಂಡಿತು.
ಪಾಕಿಸ್ತಾನ ಪರ ಅತ್ಯುತ್ತಮ ಸ್ಪಿನ್ ಬೌಲ್ ಮಾಡಿದ ಮುಹಮ್ಮದ್ ನವಾಝ್ 19 ರನ್ ನೀಡಿ ಪ್ರಮುಖ 4 ವಿಕೆಟ್‌ಗಳನ್ನು ಉರುಳಿಸಿದರು. ಆ ಮೂಲಕ ವೃತ್ತಿ ಜೀವನದ ಶ್ರೇಷ್ಠ ಪ್ರದರ್ಶನದೊಂದಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಮುಹಮ್ಮದ್ ವಸೀಮ್ 3 ವಿಕೆಟ್ ಪಡೆದರೆ, ಶದಾಬ್ ಖಾನ್ ಎರಡು ವಿಕೆಟ್ ಕಿತ್ತರು.
ಪಾಕಿಸ್ತಾನ 275/8
ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ದಾಖಲೆಯ ಶತಕ ಸಿಡಿಸಿದ್ದ ಬಾಬರ್ ಆಝಮ್ ಎರಡನೇ ಹಣಾಹಣಿಯಲ್ಲಿಯೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದರು. 93 ಎಸೆತಗಳನ್ನು ಎದುರಿಸಿದ್ದ ಅವರು, ಒಂದು ಸಿಕ್ಸರ್ ಐದು ಬೌಂಡರಿಯೊಂದಿಗೆ 77 ರನ್ ಗಳಿಸಿದರು. ಇದರ ಜೊತೆಗೆ ಇಮಾಮ್ ಉಲ್ ಹಕ್ ಜೊತೆಗೆ ಸತತ ನಾಲ್ಕನೇ ಬಾರಿ 100ಕ್ಕೂ ಹೆಚ್ಚಿನ ಜೊತೆಯಾಟವನ್ನು ಆಡಿದರು. ಅಂತಿಮವಾಗಿ ಪಾಕಿಸ್ತಾನ ತನ್ನ ಪಾಲಿನ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 275 ರನ್ ಕಲೆ ಹಾಕಿತ್ತು.