ಬಿ ಎಲ್ ಸಂತೋಷ್ ಮೊದಲು ತಮ್ಮ ಶಾಸಕರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಿ: ಜಗದೀಶ್ ಶೆಟ್ಟರ್ ಕಿಡಿ

Prasthutha|

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದ 45 ಪ್ರಮುಖ ನಾಯಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಜಗದೀಶ್ ಶೆಟ್ಟರ್ ಮೊದಲು ತಮ್ಮ ಶಾಸಕರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಿ ಎಂದು ಹೇಳಿದ್ದಾರೆ.

- Advertisement -

ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್, ಸಂತೋಷ್ ನಾಳೆಯೇ ಆಪರೇಶನ್ ಕಮಲ ನಡೆಸಲಿ, ಎಷ್ಟು ಕಾಂಗ್ರೆಸ್ ನಾಯಕರನ್ನು ಅವರು ಸೆಳೆಯುತ್ತಾರೋ ನೋಡಿಬಿಡೋಣ ಎಂದು ಸವಾಲೆಸೆದರು.


ಕಾಂಗ್ರೆಸ್ 135 ಶಾಸಕರನ್ನೊಳಗೊಂಡ ಗಟ್ಟಿಮುಟ್ಟಾದ ಸರ್ಕಾರ, ಇಂಥ ಸರ್ಕಾರವನ್ನು ಯಾರು ತಾನೆ ಬಿಟ್ಟು ಹೋಗುವುದು ಸಾಧ್ಯ? ಎಂದು ಹೇಳಿದ ಶೆಟ್ಟರ್, ರಾಜ್ಯದಲ್ಲಿ ಬಿಜೆಪಿ ಒಂದು ಮುಳುಗುವ ಹಡಗಿನ ಸ್ಥಿತಿಯಲ್ಲಿದೆ, ಸಂತೋಷ್ ತಮ್ಮ ಶಾಸಕರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಿ ಎಂದರು.