ಅಯೋಧ್ಯೆ ವಿವಾದ ಕೋರ್ಟ್ ಇತ್ಯರ್ಥ ಮಾಡಿದೆ, ಪಾಲಿಸುವುದು ಎಲ್ಲರ ಕರ್ತವ್ಯ: ಕೆಪಿಸಿಸಿ ಕಾರ್ಯದರ್ಶಿ

Prasthutha|

ಮಂಗಳೂರು: ಅಯೋಧ್ಯೆ ವಿವಾದ ಹಿಂದೆ ಇತ್ತು, ಕೋರ್ಟ್ ಇತ್ಯರ್ಥ ಆಗಿದೆ, ಅದನ್ನು ಪಾಲಿಸುವುದು ಎಲ್ಲರ ಕರ್ತವ್ಯ, ಆ ಹಿನ್ನೆಲೆಯಲ್ಲಿ ರಾಮಮಂದಿರ ನಿರ್ಮಾಣ ಆಗಿದೆ. ಇದನ್ನು ರಾಜಕೀಯಗೊಳಿಸಿ‌ ಲಾಭ ಮಾಡೋದು ಸರಿಯಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್ ಹೇಳಿದ್ದಾರೆ.

- Advertisement -

ಜ.22ರಂದು ರಾಮ ಮಂದಿರ ಲೋಕಾರ್ಪಣೆ ಹೆಮ್ಮೆ ವಿಚಾರ. ಶ್ರದ್ಧಾ ಭಕ್ತಿಯಿಂದ ಆಚರಿಸಬೇಕಾದ ಕಾರ್ಯಕ್ರಮವನ್ನು ಬಿಜೆಪಿಯವರು ರಾಜಕೀಯ ಮಾಡೋದು ಖೇದಕರ‌ ಎಂದು ಅವರು ಇದೇ ಸಂದರ್ಭ ಹೇಳಿದ್ದಾರೆ.

ಬಿಜೆಪಿಯವರು ಅವಿದ್ಯಾವಂತರು. ಮಾತನಾಡುವ ರೀತಿ ಬೇರೆ ಬೇರೆ ರೀತಿ ವ್ಯಾಖ್ಯಾನ ಮಾಡ್ತೀರಿ. ರಾಮ ಭಕ್ತರ ಮೇಲೆ ಕೈ ಸರ್ಕಾರಕ್ಕೆ ಕೋಪವೇಕೆ ಎನ್ನುತ್ತಾರೆ. ಎಲ್ಲಿಂದ ಎಲ್ಲಿಗೆ ಕನೆಕ್ಟ್ ಮಾಡ್ತೀರಿ ಎಂದು ಅವರು ಬಿಜೆಪಿ ವಿರುದ್ಧ ಹರಿಹಾಯ್ದರು.

- Advertisement -

ಹುಬ್ಬಳ್ಳಿಯಲ್ಲಿ ಇಬ್ಬರ ಮೇಲೆ LPC – ಲಾಂಗ್ ಪೆಂಡಿಂಗ್ ಕೇಸ್ ಅಂತ ಪೆಂಡಿಂಗ್ ಇಟ್ಟಿದ್ರು. ಅವರ ಮೇಲೆ ಕ್ರಿಮಿನಲ್ ಪ್ರಕರಣ ಇತ್ತು. ಕೋರ್ಟ್ ಆಜ್ಞೆ ಪ್ರಕಾರ ವಾರಂಟ್ ಇರುವಾಗ ಬಂಧಿಸಲಾಗಿದೆ. ಇದರಲ್ಲಿ ರಾಜಕೀಯ ಹೇಗೆ? ಸಾಮಾನ್ಯ ಜ್ಞಾನ ಇರಬೇಕು. ಯಾಕೆ ನಿಮ್ಮ ಸರ್ಕಾರ ಇತ್ತಲ್ಲ, ಪ್ರಕರಣ ಮುಗಿಸಬಹುದಿತ್ತಲ್ಲ, ಜನ ಮೆಚ್ಚುವ ಕೆಲಸ ಮಾಡಿ, ಮಂಗಳೂರಲ್ಲಿ ಎಲ್ಲ ಅಗೆದು ಹಾಕಿದ್ದಾರೆ, ಇದರ ಬಗ್ಗೆ ಗಮನ ಹರಿಸ್ತಿದೀರಾ? ಅದು ಬಿಟ್ಟು ಜನರ ನಡುವೆ ಕಂದಕ ಸೃಷ್ಟಿಸಿದ್ರೆ ರಾಮ ಮೆಚ್ಚಲ್ಲ ಎಂದು ಬಿಜೆಪಿ ವಿರುದ್ದ ಕಿಡಿಗಾರಿದರು.

Join Whatsapp