ಒಂದೇ ಒಲಿಂಪಿಕ್ಸ್ ನಲ್ಲಿ ಎರಡು ಪದಕ ಪಡೆದ ಮೊದಲ ಭಾರತೀಯೆ ಅವನಿ ಲೇಖರ

Prasthutha|

ಟೋಕಿಯೋ: ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಅವನಿ ಲೇಖರ ಅವರು 50 ಮೀಟರ್ ರೈಫಲ್ 3 ಪೊಜೀಶನ್ಸ್ ಎಸ್ ಎಚ್1 ಸ್ಪರ್ಧೆಯಲ್ಲಿ ಕಂಚು ಗೆದ್ದರು. ಈ ಮೂಲಕ ಭಾರತದ ಯಾವುದೇ ಸ್ಪರ್ಧಿ, ಯಾವುದೇ ಒಂದೇ ಒಲಿಂಪಿಕ್ಸ್ ನಲ್ಲಿ ಎರಡು ಪದಕ ಗೆಲ್ಲದಿದ್ದ ದಾಖಲೆಯನ್ನು ಅವರು ಬರೆದರು. ಅವನಿ ಲೇಖರ ಅವರು ಇದಕ್ಕೆ ಮೊದಲು 10 ಮೀಟರ್ ರೈಫಲ್ಸ್ ನಲ್ಲಿ ಚಿನ್ನ ಗೆದ್ದಿದ್ದರು.

- Advertisement -

ಅವನಿಯವರು ಎರಡನೆಯವರಾಗಿ ಫೈನಲ್ ಪ್ರವೇಶಿಸಿದ್ದರು. ಆದರೆ ಫೈನಲ್ ನ ಮೊದಲ ಎರಡು ಸರಣಿಯಲ್ಲಿ ಅವರು ಆರನೆಯ ಸ್ಥಾನದಲ್ಲಿ ಇದ್ದರು. ಇನ್ನು ಪದಕ ಕೈ ತಪ್ಪಿತು ಎಂಬ ಹಂತದಲ್ಲಿ ಅಮೋಘವಾಗಿ ಗುರಿಯಿಟ್ಟು ಒಟ್ಟು 445.9 ಅಂಕ ಗಳಿಸಿದರು. ಆ ಮೂಲಕ ಅವರು ಕಂಚು ಗೆದ್ದುಕೊಂಡರು.



Join Whatsapp