ಒಳ ಉಡುಪಿನಲ್ಲಿಯೇ ರೈಲಿನಲ್ಲಿ ಓಡಾಟ: ಸ್ಪಷ್ಟನೆ ನೀಡಿದ ಶಾಸಕ ಗೋಪಾಲ್ ಮೆಂಡನ್

Prasthutha|

ನವದೆಹಲಿ: ಬಿಹಾರದ ಜೆಡಿಯು ಶಾಸಕರೊಬ್ಬರು ಒಳ ಉಡುಪು ಧರಿಸಿ ರೈಲಿನೊಳಗೆ ಓಡಾಡಿ ಸುದ್ದಿಯಾಗುತ್ತಿದ್ದಂತೆಯೇ ಸಮಜಾಯಿಷಿ ನೀಡಿದ ಘಟನೆ ನವದೆಹಲಿಯಲ್ಲಿ ನಡೆದಿದೆ.


ಶಾಸಕರನ್ನು ಗೋಪಾಲ್ ಮಂಡಲ್ ಎಂದು ಗುರುತಿಸಲಾಗಿದ್ದು, ಅವರು ರೈಲಿನಲ್ಲಿ ಒಳ ಉಡುಪು ಧರಿಸಿ ಸಂಚರಿಸುತ್ತಿದ್ದರೆಂಬ ಕಾರಣಕ್ಕೆ ಪ್ರಯಾಣಿಕರೊಬ್ಬರು ಅವರೊಂದಿಗೆ ವಾಗ್ವಾದಕ್ಕೆ ಇಳಿದಿದ್ದರು. ಈ ದೃಶ್ಯದ ವೀಡಿಯೊ ವೈರಲ್ ಆಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ಮಂಡಲ್ ಅವರು,‘ ನನ್ನ ಹೊಟ್ಟೆ ಕೆಟ್ಟಿತ್ತು. ಹಾಗಾಗಿ ಆತುರದಲ್ಲಿ ಒಳ ಉಡುಪಿನಲ್ಲೇ ನಾನು ಶೌಚಾಲಯಕ್ಕೆ ತೆರಳಿದೆ’ ಎಂದಿದ್ದಾರೆ.

- Advertisement -


ಪಟ್ನಾ–ನವದೆಹಲಿ ತೇಜಸ್ ರಾಜಧಾನಿ ರೈಲಿನಲ್ಲಿ ಗುರುವಾರ ಈ ಘಟನೆ ನಡೆದಿದೆ. ರೈಲ್ವೆ ಪೊಲೀಸ್ ಪಡೆ(ಆರ್ಪಿಎಫ್) ಮತ್ತು ಟಿಕೆಟ್ ಪರೀಕ್ಷಕರು ಮಧ್ಯ ಪ್ರವೇಶಿಸಿ ಇಬ್ಬರ ನಡುವಿನ ವಾಗ್ವಾದವನ್ನು ನಿಲ್ಲಿಸಿದ್ದಾರೆ.


‘ನಾನು ರೈಲು ಹತ್ತಿದ ತಕ್ಷಣ ಶೌಚಾಲಯಕ್ಕೆ ಹೋಗುವ ಆತುರದಲ್ಲಿದ್ದೆ. ಈ ಅವಸರದಲ್ಲಿ ಕುರ್ತಾ ಮತ್ತು ಪೈಜಾಮಾ ತೆಗೆದು ಟವೆಲ್ ಅನ್ನು ಸೊಂಟಕ್ಕೆ ಸುತ್ತುವ ಬದಲು, ಭುಜದ ಮೇಲೆ ಹಾಕಿ ಶೌಚಾಲಯದತ್ತ ತೆರಳಿದೆ’ ಎಂದು ಮಂಡಲ್ ತಿಳಿಸಿದರು.

- Advertisement -