ಔರಂಗಾಬಾದ್‌, ಉಸ್ಮಾನಾಬಾದ್‌ ಹೆಸರು ಬದಲಿಸಿದ ಮಹಾರಾಷ್ಟ್ರ ಸರ್ಕಾರ

Prasthutha|

ಮುಂಬೈ: ಮಹಾರಾಷ್ಟ್ರದ ಔರಂಗಾಬಾದ್‌ ಮತ್ತು ಉಸ್ಮನಾಬಾದ್‌ ಜಿಲ್ಲೆಗಳ ಹೆಸರುಗಳ ಬದಲಾವಣೆ ಬಗ್ಗೆ ಆದೇಶ ಹೊರಡಿಸಲಾಗಿದೆ. ಸಿಎಂ ಏಕನಾಥ ಶಿಂಧೆ ನೇತೃತ್ವದ ಸರ್ಕಾರ ಔರಂಗಾಬಾದ್‌ ಜಿಲ್ಲೆಯನ್ನು ಛತ್ರಪತಿ ಸಾಂಭಾಜಿನಗರ, ಉಸ್ಮನಾಬಾದ್‌ ಜಿಲ್ಲೆಯನ್ನು ಧಾರಾಶಿವ ಎಂದು ಹೆಸರು ಬದಲಿಸಿ ಆದೇಶ ಹೊರಡಿಸಿದೆ.

- Advertisement -

ಕೆಲವು ತಿಂಗಳ ಹಿಂದೆ ಈ ಎರಡು ಹೆಸರುಗಳ ಬಗ್ಗೆ ಸಲಹೆ ಮತ್ತು ಆಕ್ಷೇಪಗಳನ್ನು ರಾಜ್ಯ ಸರ್ಕಾರ ಆಹ್ವಾನಿಸಿತ್ತು. ಗಮನಾರ್ಹ ಅಂಶವೆಂದರೆ, ಹೆಸರು ಬದಲಾವಣೆ ಮಾಡುವುದರ ಬಗ್ಗೆ ಮಹಾ ವಿಕಾಸ ಅಘಾಡಿ ಸರ್ಕಾರದ ಕೊನೆಯ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಕಳೆದ ವರ್ಷದ ಜುಲೈನಲ್ಲಿ ಹೆಸರು ಬದಲಾವಣೆಗೆ ಹಾಲಿ ಸರ್ಕಾರ ಅನುಮೋದನೆ ನೀಡಿತ್ತು.