ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಕೆಗೆ ಯತ್ನ: ಬಿಬಿಎಂಪಿ ಕಚೇರಿ ಸಿಬ್ಬಂದಿ ಸಹಿತ ಐವರ ಬಂಧನ

Prasthutha|

ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟಿ ಮೌಲ್ಯದ ಆಸ್ತಿ ಕಬಳಿಕೆಗೆ ಯತ್ನಿಸಿದ ಆರೋಪದಡಿ ಬಿಬಿಎಂಪಿಯ ಪ್ರಥಮ ದರ್ಜೆ ಸಹಾಯಕನ ಸಹಿತ ಐವರು ಆರೋಪಿಗಳನ್ನು ಹಲಸೂರು ಗೇಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

- Advertisement -

ಆರ್. ಆರ್ ನಗರ ಬಿಬಿಎಂಪಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ನವೀನ್, ಜನಾರ್ದನ್, ನಾರಾಯಣಸ್ವಾಮಿ, ಎಂ. ಎಸ್ ಪ್ರಸಾದ್ ಹಾಗೂ ಎಂ. ಎಸ್ ದಿವ್ಯ ಬಂಧಿತರು.

ಪಟ್ಟಣಗೆರೆ ಗ್ರಾಮದ ರಾಮಕೃಷ್ಣಯ್ಯ ಎಂಬವರು 40 ಕೋಟಿ ಮೌಲ್ಯದ 3 ಎಕರೆ ಜಮೀನು ಹೊಂದಿದ್ದು, ರಿಯಲ್ ಎಸ್ಟೇಟ್ ಸಂಸ್ಥೆಯೊಂದಕ್ಕೆ ಸಂಬಂಧಿಸಿದ ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಕೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

- Advertisement -

ರಾಮಕೃಷ್ಣಯ್ಯ ನೀಡಿದ ದೂರಿನ ಮೇಲೆ ಹಲಸೂರು ಗೇಟ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ನಕಲಿ ಭೂ ದಾಖಲೆ, ಜಮೀನು ಮಾಲೀಕನ ನಕಲಿ ಡೆತ್ ಸರ್ಟಿಫಿಕೇಟ್ ಸೃಷ್ಟಿಸಿ ವಂಚಿಸಲಾಗಿದೆ ಎಂದು ರಾಮಕೃಷ್ಣಯ್ಯ ದೂರು ನೀಡಿದ್ದರು.

Join Whatsapp