ಶಬರಿಮಲೆಯಲ್ಲಿ ಅಪ್ರಾಪ್ತ ಭಕ್ತೆಗೆ ಲೈಂಗಿಕ ಕಿರುಕುಳ ಯತ್ನ: 62 ವರ್ಷದ ವ್ಯಕ್ತಿ ಅರೆಸ್ಟ್

Prasthutha|

ಶಬರಿಮಲೆ: ಶಬರಿಮಲೆ ಸನ್ನಿಧಾನದಲ್ಲಿ ಒಂಬತ್ತು ವರ್ಷದ ಭಕ್ತೆಗೆ ಲೈಂಗಿಕ ಕಿರುಕುಳ ನಡೆದಿದ್ದು, 62 ವರ್ಷದ ಮಾಲಾಧಾರಿ ವ್ಯಕ್ತಿಯನ್ನು ಬಂಧಿಸಲಾಗಿದೆ. ಹುಡುಗಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಕೊಳತ್ತೂರು ಪೊಲೀಸರು ಸುಬ್ರಮಣಿಯನ್ ಎಂಬಾತನನ್ನು ಬಂಧಿಸಿದ್ದಾರೆ.

- Advertisement -

ಡಿಸೆಂಬರ್ 23ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿ ತನ್ನ ತಂದೆಯೊಂದಿಗೆ ಶಬರಿಮಲೆಗೆ ಯಾತ್ರೆಗೆ ಹೋಗಿದ್ದಳು. ಬಾಲಕಿಯ ತಂದೆ ಶೌಚಾಲಯಕ್ಕೆ ಹೋಗುವಾಗ ತನ್ನ ಮಗಳನ್ನು ನೋಡಿಕೊಳ್ಳುವಂತೆ ಸುಬ್ರಮಣಿಯನ್‌ಗೆ ಹೇಳಿದ್ದರು. ಈ ವೇಳೆ ಆತ ಅಯ್ಯಪ್ಪ ಶರಣಂ ಎಂದು ತನ್ಮಯವಾಗಿ ಮಂತ್ರ ಹೇಳುತ್ತಿರುವ ಹುಡುಗಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ ಎನ್ನಲಾಗಿದೆ.
ಬಾಲಕಿ ಮನೆಗೆ ಮರಳಿದ ನಂತರ ಘಟನೆಯ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದಾಳೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

Join Whatsapp