ಅಡಿಕೆ ಮರ ಕಳ್ಳತನಕ್ಕೆ ಯತ್ನ; ಮೂವರ ಬಂಧನ

Prasthutha|

ಹಾಸನ: ಹಾಡಹಗಲೇ ಅಡಿಕೆ ಮರ ಕದಿಯಲು ಯತ್ನಿಸಿದ ಮೂವರನ್ನು ಪೊಲೀಸರು ಬಂಧಿಸಿರುವ ಘಟನೆ ಬೇಲೂರು ತಾಲೂಕಿನ ಮೂಳೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ವಿಶ್ವೇಶ್ವರ ಎಂಬವರ ತೋಟದಲ್ಲಿ ಕಳೆದ ಎರಡು ವರ್ಷಗಳಿಂದಲೂ ಅಡಕೆ ಮರಗಳ ಕಳ್ಳತನ ನಡೆಯುತ್ತಿದ್ದು,  ಈ ಹಿನ್ನೆಲೆ ಬೇರೆ ಬೇರೆ ಆಯಾಮಗಳಲ್ಲಿ ಕಳ್ಳರಿಗಾಗಿ ಪತ್ತೆ ಕಾರ್ಯ ನಡೆಸಿದರೂ ಕೂಡ ಸುಳಿವು ದೊರೆತಿರಲಿಲ್ಲ. ಹೇಗಾದರೂ ಮಾಡಿ ಕಳ್ಳರನ್ನು ಪತ್ತೆ ಮಾಡಲೇಬೇಕು ಎಂದು ನಿರ್ಧರಿಸಿದ ಮಾಲೀಕ ತಮ್ಮ ನಾಲ್ಕು ಎಕರೆ ಜಮೀನಿಗೆ ತಂತಿ ಬೇಲಿ ಹಾಕಿಸಿ, ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಿದ್ದರು.

- Advertisement -

ಕಳ್ಳರು ಎಂದಿನಂತೆ ಗೇಟ್ ಬೀಗ ಮುರಿದು ಅಡಿಕೆ ತೋಟಕ್ಕೆ ನುಗ್ಗಿ ಮರ ಕತ್ತರಿಸಿ ಹೊತ್ತೊಯ್ಯಲು ಮುಂದಾಗಿದ್ದಾರೆ. ಈ ವೇಳೆ ತೋಟಕ್ಕೆ ಯಾರೋ ಬಂದಿರುವುದಾಗಿ ವಿಶ್ವೇಶ್ವರ ಮೊಬೈಲ್‌ಗೆ ಮೆಸೇಜ್ ಬಂದಿದೆ. ಕೂಡಲೇ ವಿಶ್ವೇಶ್ವರ ಅವರು ಹಳೇಬೀಡು ಪೊಲೀಸರಿಗೆ ಕರೆ ಮಾಡಿ ಸುದ್ದಿ ತಿಳಿಸಿದ್ದು, ಪೊಲೀಸರು ಮೂವರು ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -