ಇಸ್ಲಾಮನ್ನು ಅವಹೇಳನ ಮಾಡಿದ ‘ಆರ್ಗನೈಸರ್’ ವರದಿಗಾರನಿಗೆ ಬೆದರಿಕೆ ಆರೋಪ; ಪತ್ರಕರ್ತನ ಸ್ನೇಹಿತನ ಬಂಧನ

Prasthutha|

ನವದೆಹಲಿ: ಕೆಲ ದಿನಗಳ ಹಿಂದೆ ಆರ್ ಎಸ್ ಎಸ್  ನ ವಾರ ಪತ್ರಿಕೆ ‘ಆರ್ಗನೈಸರ್’  ನ  ವರದಿಗಾರನಿಗೆ  ಬೆದರಿಕೆಯೊಡ್ಡಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ.

- Advertisement -

ಇಸ್ಲಾಂ ಧರ್ಮದ ವಿರುದ್ಧ ಬರೆದ ಆರ್ಗನೈಸರ್ ಪತ್ರಿಕೆಯ ವರದಿಗಾರ ನಿಶಾಂತ್ ಆಜಾದ್ ಗೆ ನಿರ್ದಿಷ್ಟ ಸಮುದಾಯಕ್ಕೆ ಸೇರಿದ ವ್ಯಕ್ತಿಗಳು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕೆಲವು ಮಾಧ್ಯಮಗಳು ಸುದ್ದಿಯನ್ನು ವೈಭವೀಕರಿಸಿ ಪ್ರಕಟಿಸಿದ್ದವು.  ಆದರೆ ಇಂದಿರಾಪುರಂ ಠಾಣೆಯ ಸೈಬರ್ ಸೆಲ್ ಮೂಲಕ ಡೇಟಾ  ವಿಶ್ಲೇಷಿಸಿದಾಗ ಬೆದರಿಕೆ ಕರೆಯ ಹಿಂದಿರುವ ವ್ಯಕ್ತಿ ವರದಿಗಾರನ ಪರಿಚಯಸ್ಥ ಪ್ರಾಣಪ್ರಿಯಾ ವತ್ಸ್ ಎಂದು ತಿಳಿದುಬಂದಿದೆ.

ಪತ್ರಕರ್ತ ನಿಶಾಂತ್ ಆಜಾದ್,  ತಾನು ಮಾಡುತ್ತಿರುವ ಕೆಲಸದ ಕಾರಣಕ್ಕಾಗಿ ಅಮೆರಿಕ ಮೂಲದ ಅಪರಿಚಿತ ಸಂಖ್ಯೆಯಿಂದ ಬೆದರಿಕೆ ಸಂದೇಶಗಳು ಮತ್ತು ವಾಟ್ಸಾಪ್ ಕರೆಗಳು ಬರುತ್ತಿವೆ ಎಂದು ಆರೋಪಿಸಿ ಸೆಪ್ಟೆಂಬರ್ 10 ರಂದು ಉತ್ತರ ಪ್ರದೇಶದ ಗಾಜಿಯಾಬಾದ್ ನ ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 

- Advertisement -

ಈ ಬಗ್ಗೆ  ನಿಶಾಂತ್ ಗೆ  ವಾಟ್ಸಾಪ್ ನಲ್ಲಿ ಬಂದಿದ್ದ ಸಂದೇಶದ ಸ್ಕ್ರೀನ್ ಶಾಟ್ ಗಳನ್ನು ಆರ್ಗನೈಸರ್ ವಾರಪತ್ರಿಕೆ ಸಹಿತ  ಇತರ ಮಾಧ್ಯಮಗಳು ಮುಸ್ಲಿಮರ ವಿರುದ್ಧ ಬೊಟ್ಟು ಮಾಡಿ ಬಹಳ ವರ್ಣರಂಜಿತವಾಗಿ ಟ್ವೀಟ್ ಮಾಡಿದ್ದವು.

ಇದಕ್ಕೆ ಪ್ರತಿಕ್ರಿಯಿಸಿರುವ  ಆಲ್ಟ್ ನ್ಯೂಸ್ ನ  ಸಹ-ಸಂಸ್ಥಾಪಕ ಮುಹಮ್ಮದ್ ಜುಬೈರ್, ಆರೋಪಗಳು ಮೊದಲು ಕಾಣಿಸಿಕೊಂಡಾಗ ಹಲವಾರು ಮುಖ್ಯವಾಹಿನಿಯ ಮಾಧ್ಯಮ ಚಾನೆಲ್ ಗಳು ಈ ಸುದ್ದಿಯನ್ನು ಹೇಗೆ ವರದಿ ಮಾಡಿದವು ಎಂದು ಟ್ವೀಟ್ ಮಾಡಿದ್ದಾರೆ.

Join Whatsapp