December 1, 2020

ಬಿಜೆಪಿ ತೆಲಂಗಾಣ ಅಧ್ಯಕ್ಷ ಬಂಡಿ ಸಂಜಯ್ ಕೊಲೆ ಯತ್ನ ವರದಿ ಸುಳ್ಳು : ಹೈದರಾಬಾದ್ ಪೊಲೀಸ್

ಹೈದರಾಬಾದ್ : ಬಿಜೆಪಿ ತೆಲಂಗಾಣ ಘಟಕ ಅಧ್ಯಕ್ಷ ಬಂಡಿ ಸಂಜಯ್ ಕೊಲೆ ಯತ್ನ ನಡೆದಿದೆ ಎಂಬ ವರದಿಗಳನ್ನು ಹೈದರಾಬಾದ್ ಜಂಟಿ ಪೊಲೀಸ್ ಆಯಕ್ತ ಪಿ. ವಿಶ್ವಪ್ರಸಾದ್ ನಿರಾಕರಿಸಿದ್ದಾರೆ. ಅಲ್ಲದೆ, ಈ ವಿಷಯದಲ್ಲಿ ಕೆಲವು ಟಿವಿ ವಾಹಿನಿಗಳು ಆಧಾರ ರಹಿತ ವದಂತಿಗಳನ್ನು ಹಬ್ಬುತ್ತಿವೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

“ಬಂಡಿ ಸಂಜಯ್ ಕೊಲೆ ಯತ್ನ ನಡೆದಿದೆ ಎಂಬ ತಪ್ಪಾದ ಸುದ್ದಿಗಳನ್ನು ಕೆಲವು ಟಿವಿ ವಾಹಿನಿಗಳು ತೋರಿಸುತ್ತಿವೆ. ಈ ಮಾಹಿತಿ ತಪ್ಪು. ದಯವಿಟ್ಟು ಇಂತಹ ವದಂತಿಗಳನ್ನು ನಂಬಬೇಡಿ’’ ಎಂದು ವಿಶ್ವಪ್ರಸಾದ್ ಕೋರಿದ್ದಾರೆ.

ಎರಡು ರಾಜಕೀಯ ಗುಂಪುಗಳ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ಸಂಜಯ್ ರ ಬೆಂಬಲಿಗರೊಬ್ಬರ ಕಾರಿನ ಗ್ಲಾಸ್ ಗೆ ಹಾನಿಯಾಗಿದೆ. ಈ ಸಂಬಂಧ ದೂರು ದಾಖಲಾಗಿದೆ. ಇದರಲ್ಲಿ ಯಾರೊಬ್ಬರಿಗೂ ಗಾಯಗಳಾಗಿಲ್ಲ ಎಂದು ಅವರು ತಿಳಿಸಿದ್ದಾರೆ.  

ಟಾಪ್ ಸುದ್ದಿಗಳು

ವಿಶೇಷ ವರದಿ