ಮಸೀದಿಯೊಳಗೆ ಅಪವಿತ್ರಕ್ಕೆ ಯತ್ನ: ನಾಲ್ವರು ಸಂಘಪರಿವಾರದ ಕಾರ್ಯಕರ್ತರ ಬಂಧನ

Prasthutha|

ರಾಂಚಿ: ಜಾರ್ಖಂಡ್ ಗಿರಿದಿಹ್’ನಲ್ಲಿರುವ ಮಸೀದಿಯೊಳಗೆ ಮೂತ್ರ ವಿಸರ್ಜನೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಸಂಘಪರಿವಾರದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ದುರ್ಗಾಪೂಜೆಯ ಒಂಬತ್ತನೇ ದಿನದ ಶೋಭಾಯಾತ್ರೆಯ ವೇಳೆ ದುಷ್ಕರ್ಮಿಗಳು ಈ ಕುಕೃತ್ಯವೆಸಗಿದ್ದರು.

- Advertisement -

ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಸನ್ನಿ ರಾಜ್ ಎಂಬಾತ ಜಾರ್ಖಂಡ್’ನ ಖುಟ್ಟಾದಲ್ಲಿರುವ ನಯೀ ಮಸೀದಿಗೆ ಬಂದಿದ್ದು, ಈ ಸಂದರ್ಭದಲ್ಲಿ ಮಸೀದಿಯೊಳಗೆ ಪ್ರಾರ್ಥನೆ ನಡೆಯುತ್ತಿತ್ತು. ಆತ ಪ್ರವಚನ ನೀಡುವಲ್ಲಿಗೆ ತೆರಳಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ಈತನ ಈ ಕುಕೃತ್ಯ ಮಸೀದಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಸಂದರ್ಭದಲ್ಲಿ ಸಾರ್ವಜನಿಕರು ಮಸೀದಿಯ ಗೇಟ್’ನ ಹೊರಗಡೆ ಸ್ಕೂಟರ್’ನೊಂದಿಗೆ ಕಾಯುತ್ತಿದ್ದ ರೋಹಿತ್, ದೀಪಾಲೋಕ್ ಮಿತ್ರ ಮತ್ತು ಚಂದನ್ ಗುಪ್ತಾ ಅವರನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

- Advertisement -

ಸದ್ಯ ಮಸೀದಿ ಕಮಿಟಿಯವರು ನೀಡಿದ ದೂರಿನನ್ವಯ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 109, 153, 153ಎ, 295, 295ಎ, 296, 120ಬಿ ಮತ್ತು 34 ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

Join Whatsapp