ಪ್ರೊ. ಭಗವಾನ್ ಗೆ ಮಸಿ ಬಳಿದ ಮೀರಾ ರಾಘವೇಂದ್ರಗೆ ಪೊಲೀಸ್ ನೋಟಿಸ್

Prasthutha|

ಬೆಂಗಳೂರು : ಸಾಹಿತಿ, ಚಿಂತಕ ಪ್ರೊ. ಭಗವಾನ್ ಅವರ ಮುಖಕ್ಕೆ ಕೋರ್ಟ್ ಆವರಣದಲ್ಲೇ ಮಸಿ ಬಳಿದ ನ್ಯಾಯವಾದಿ ಮೀರಾ ರಾಘವೇಂದ್ರಗೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ಹಲಸೂರು ಗೇಟ್ ಠಾಣಾ ಪೊಲೀಸರು ನೋಟಿಸ್ ನೀಡಿದ್ದಾರೆ.

- Advertisement -

ಶ್ರೀರಾಮನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆಪಾದಿಸಿ ಮೀರಾ ರಾಘವೇಂದ್ರ ಭಗವಾನ್ ಮುಖದ ಮೇಲೆ ಇತ್ತೀಚೆಗೆ ಕೋರ್ಟ್ ಆವರಣದಲ್ಲೇ ಮಸಿ ಹಾಕಿದ್ದಳು. ಭಗವಾನ್ ವಿರುದ್ಧ ಈಕೆ ಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿದ್ದಳು. ಆದರೆ, ಪ್ರಕರಣದಲ್ಲಿ ಭಗವಾನ್ ಗೆ ಕೋರ್ಟ್ ಜಾಮೀನು ನೀಡಿತ್ತು. ಇದರಿಂದ ಹತಾಶಳಾದಂತೆ ಕಂಡುಬಂದಿರುವ ವಕೀಲೆ ಮೀರಾ ರಾಘವೇಂದ್ರ ಕೋರ್ಟ್ ಆವರಣದಲ್ಲೇ ಈ ಕೃತ್ಯ ಎಸಗಿದ್ದಾಳೆ. ಈ ಬಗ್ಗೆ ಮೀರಾ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ನೋಟಿಸ್ ತಲುಪಿದ ಮೂರು ದಿನಗಳಲ್ಲಿ ವಿಚಾರಣೆಗೆ ಹಾಜರಾಗಬೇಕು, ಇಲ್ಲವಾದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್ ನಲ್ಲಿ ಮೀರಾ ರಾಘವೇಂದ್ರಗೆ ತಿಳಿಸಲಾಗಿದೆ.

Join Whatsapp