ಪ್ರಕಾಶ್ ಝಾ ಚಿತ್ರ ತಂಡದ ಬಜರಂಗದಳ ದಾಳಿ: ಸಮುದಾಯ ಸಂಘಟನೆ ತೀವ್ರ ಖಂಡನೆ

Prasthutha|

ಬೆಂಗಳೂರು: ಚಿತ್ರ ನಿರ್ದೇಶಕ ಪ್ರಕಾಶ್ ಝಾ ನಿರ್ದೇಶನದ, ನಟ ಬಾಬಿ ಡಿಯೋಲ್ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ವೆಬ್ ಸರಣಿ “ಆಶ್ರಮ್ 3” ತಂಡದ ಚಿತ್ರೀಕರಣ ಘಟಕದಲ್ಲಿ ಬಜರಂಗದಳದ ಕಾರ್ಯಕರ್ತರು ನಡೆಸಿರುವ ದಾಳಿಯನ್ನು ಸಾಂಸ್ಕೃತಿಕ ಸಂಘಟನೆ ಸಮುದಾಯ ಖಂಡಿಸಿದೆ.

- Advertisement -


ತಮ್ಮ ಚಿಂತನೆಗೆ ಒಗ್ಗದ ಕಲಾವಿದರ ಸೃಜನಶೀಲ ಚಟುವಟಿಕೆಗಳ ಮೇಲೆ ದಾಳಿ ನಡೆಸುವ ಬಜರಂಗದಳದ ದಾಳಿ ಖಂಡನೀಯ. ಈ ಸಂಘಟನೆಯ ಕ್ರಿಮಿನಲ್ ಕೃತ್ಯಕ್ಕೆ ಸಂಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕೆಂದು ಸಮುದಾಯ ಸಂಘಟನೆಯ ರಾಜ್ಯ ಅಧ್ಯಕ್ಷ ಅಚ್ಯುತ ಒತ್ತಾಯಿಸಿದ್ದಾರೆ.


‘ಭೋಪಾಲದ ಹೊರವಲಯದಲ್ಲಿ ಆಶ್ರಮ್ 3 ವೆಬ್ ಸರಣಿಯ ಶೂಟಿಂಗ್ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಬಜರಂಗದಳದ ಕಾರ್ಯಕರ್ತರು ಸೆಟ್ ಅನ್ನು ಧ್ವಂಸಗೊಳಿಸಿದ್ದಾರೆ. ನಿರ್ದೇಶಕ ಪ್ರಕಾಶ್ ಝಾ ಅವರ ಮೇಲೆ ಮಸಿ ಎರಚಿರುವ ವಿಡಿಯೊ ಸಾಕಷ್ಟು ವೈರಲ್ ಆಗಿದೆ.

- Advertisement -

ದುಷ್ಕರ್ಮಿಗಳ ತಂಡವೊಂದು ಮೇಲೆ ದಾಳಿ ನಡೆಸಿ ಸಾಮಗ್ರಿಗಳನ್ನು ಹಾಳುಗೆಡವಿದ್ದಲ್ಲದೆ, ಎರಡು ವಾಹನಗಳ ಗಾಜು ಒಡೆಯಲಾಗಿದೆ. ಕೆಲವರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಹಲ್ಲೆಕೋರರು ಪ್ರಕಾಶ ಝಾ ಮತ್ತು ಸನ್ನಿ ದಿಯೊಲ್ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಇಂತಹ ವಿಕೃತಿ ಪ್ರದರ್ಶಿಸಿದ ಹಲ್ಲೆಕೋರರ ಮೇಲೆ ಕಠಿಣವಾದ ಕಾನೂನು ಕ್ರಮವಹಿಸಬೇಕೆಂದು ಸಮುದಾಯ ಆಗ್ರಹಿಸಿದೆ.

Join Whatsapp