ಮಡಿಕೇರಿ: ದೌರ್ಜನ್ಯ ಕಾಯ್ದೆ ದುರುಪಯೋಗ ಪೊಲೀಸ್ ಠಾಣೆಗೆ ಮುತ್ತಿಗೆ

Prasthutha|

ಮಡಿಕೇರಿ: ಬೆಳೆಗಾರರೊಬ್ಬರ ತೋಟದ ಬೇಲಿಯನ್ನು ಕಿತ್ತು ಹಾಕಿದ ಗುಂಪೊಂದು ತೋಟದ ಮಾಲೀಕರ ವಿರುದ್ಧವೇ ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಿರುವುದು ಖಂಡನೀಯವೆಂದು ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕ ಅಸಮಾಧಾನ ವ್ಯಕ್ತಪಡಿಸಿದೆ.

- Advertisement -

ಕಾಫಿ ತೋಟದ ಬೇಲಿಯನ್ನು ಕಿತ್ತು ಹಾಕಿರುವುದಲ್ಲದೆ ಮಾಲೀಕರ ವಾಹನಕ್ಕೆ ಅಡ್ಡಲಾಗಿ ಮರದ ದಿಮ್ಮಿಗಳನ್ನಿಟ್ಟು ಸಂಚಾರಕ್ಕೆ ಅಡ್ಡಿ ಪಡಿಸಲಾಗಿದೆ. ಯಾವುದೇ ತಪ್ಪು ಮಾಡದ ಮಾಲೀಕರ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಕೂಡ ಸೂಕ್ತ ತನಿಖೆ ನಡೆಸದೆ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಪ್ರಮುಖರು ಆರೋಪಿಸಿದ್ದಾರೆ.

ದೌರ್ಜನ್ಯ ಕಾಯ್ದೆ ದುರುಪಯೋಗ ಮತ್ತು ತೋಟದ ಮಾಲೀಕರ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಿರುವುದನ್ನು ವಿರೋಧಿಸಿ ಜ.17 ರಂದು ಹುದಿಕೇರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಸಂಘದ ಪ್ರಮುಖರು ತಿಳಿಸಿದ್ದಾರೆ.

Join Whatsapp