ನಿರ್ಮಾಣ ಹಂತದ ಕಟ್ಟಡ ಕುಸಿತ: 6 ಮಂದಿ ಸಾವು

Prasthutha|

ಪುಣೆ: ನಿರ್ಮಾಣ ಹಂತದಲ್ಲಿರುವ ಮಾಲ್ ನ  ಕಟ್ಟಡದ ಒಂದು ಭಾಗವು ಕುಸಿದು ಬಿದ್ದು ಕನಿಷ್ಠ ಆರು ಕಾರ್ಮಿಕರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿರುವ  ಘಟನೆ ಗುರುವಾರ ತಡರಾತ್ರಿ ಪುಣೆಯ ಯೆರವಾಡ ಪ್ರದೇಶದಲ್ಲಿ ನಡೆದಿದೆ.

- Advertisement -

ಈ ದುರಂತವು ಸುಮಾರು 11 ಗಂಟೆಗೆ ಸಂಭವಿಸಿದ್ದು ,ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ಇದುವರೆಗೆ ಆರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ ಮತ್ತು ಅವರ ದೇಹಗಳನ್ನು ತಕ್ಷಣವೇ ನಗರದ ಸಸೂನ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಯರವಾಡ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

Join Whatsapp