ಶರಣ್ ಪಂಪ್’ವೆಲ್ ಬಂಧನಕ್ಕೆ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಆಗ್ರಹ

Prasthutha|

ತುಮಕೂರು: ವಿಎಚ್’ಪಿ ಮುಖಂಡ ಶರಣ್ ಪಂಪ್’ವೆಲ್ ಬಹಿರಂಗವಾಗಿಯೇ ಒಂದು ನಿರ್ದಿಷ್ಟ ಸಮುದಾಯವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದು, ಕೂಡಲೇ ಆತನನ್ನು ಬಂಧಿಸಬೇಕು ಎಂದು ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಜಿಲ್ಲಾಧ್ಯಕ್ಷ ತಾಜುದ್ದೀನ್ ಶರೀಫ್ ಆಗ್ರಹಿಸಿದ್ದಾರೆ.

- Advertisement -

ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿದ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್, ಜಮಾತೆ ಎ ಇಸ್ಲಾಮಿ ಹಿಂದ್ ಹಾಗೂ ಸ್ಯಾಲಿಡೇಟರಿ ಯೂತ್ ಮೂಮೆಂಟ್ ಸಂಘಟನೆಗಳ ಮುಖಂಡರು, ಸಾರ್ವಜನಿಕವಾಗಿಯೇ ದ್ವೇಷ ಕಾರುವ ಪಂಪ್ ವೆಲ್ ರಂಥ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಬೇಕು ಎಂದು ಎಸ್.ಪಿ.ಗೆ ಮನವಿ ಮಾಡಿದರು.

ಶರಣ್ ಪಂಪ್ ವೆಲ್ ದ್ವೇಷದ ಭಾಷಣ ಮಾಡಿ ತುಮಕೂರಿನ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರುವ ಕೆಲಸ ಮಾಡಿದ್ದಾರೆ. ಈ ಘಟನೆ ಪೂರ್ವನಿಯೋಜಿತ ಘಟನೆಯಾಗಿದೆ ಮತ್ತು ಕ್ರಿಮಿನಲ್ ಪಿತೂರಿಯ ಮುಂದುವರಿಕೆಯಾಗಿ ಸಮಾಜದ ನಿರ್ದಿಷ್ಟ ಸಮುದಾಯದ ವರ್ಗದ ವಿರುದ್ಧ ಅಪರಾಧಗಳನ್ನು ಎಸಗಲು ರೂಪಿಸಲಾದ ಕಾರ್ಯಕ್ರಮವಾಗಿದೆ ಎಂದು ತಾಜುದ್ದೀನ್ ಆರೋಪಿಸಿದ್ದಾರೆ.

- Advertisement -

ಸಭೆಯ ಸಂಘಟಕರು ಈ ರೀತಿಯ ಅಕ್ರಮ ಸಭೆಗಳಲ್ಲಿ ಸಮಾಜದಲ್ಲಿ ಅಶಾಂತಿ ಮೂಡಿಸುವಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಐಪಿಸಿ ಸೆಕ್ಷನ್ 120ಬಿ, 149, 153ಎ, 506 ಸೆಕ್ಷನ್ ಅಡಿಯಲ್ಲಿ ಇದು ಶಿಕ್ಷಾರ್ಹ ಅಪರಾಧವಾಗಿದೆ. ಹೀಗಾಗಿ ಕಾರ್ಯಕ್ರಮ ಆಯೋಜಕರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Join Whatsapp