ದೆಹಲಿ ಗಲಭೆ| 9 ಮುಸ್ಲಿಮ್ ಯುವಕರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

Prasthutha|

ಹೊಸದಿಲ್ಲಿ: 2020 ರ ದೆಹಲಿ ಗಲಭೆಯ ಸಂದರ್ಭದಲ್ಲಿ ಗಲಭೆ, ಅಗ್ನಿಸ್ಪರ್ಶ ಮತ್ತು ಇತರ ಅಪರಾಧಗಳ ಆರೋಪ ಹೊತ್ತಿದ್ದ ಒಂಬತ್ತು ಮಂದಿ ಮುಸ್ಲಿಮ್ ಯುವಕರನ್ನು ದೆಹಲಿ ನ್ಯಾಯಾಲಯ ಸೋಮವಾರ ಖುಲಾಸೆಗೊಳಿಸಿದೆ.

- Advertisement -

ಗಲಭೆಯಲ್ಲಿ ಆರೋಪಿಗಳು ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ದಾಖಲಿಸುವಲ್ಲಿ ಪೊಲೀಸರು ವಿಳಂಬ ಮಾಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ಗಲಭೆಯ ಸಮಯದಲ್ಲಿ ಅಂಗಡಿ ಮತ್ತು ಮನೆಗೆ ಬೆಂಕಿ ಹಚ್ಚಿದ ಆರೋಪದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 147, 149, 188, 427 ಮತ್ತು 436 ರ ಅಡಿಯಲ್ಲಿ ಆರೋಪಿಗಳ ವಿರುದ್ಧ ಪೊಲೀಸರು ಚಾರ್ಜ್’ಶೀಟ್ ಸಲ್ಲಿಸಿದ್ದರು.

- Advertisement -

ಮೊಹಮ್ಮದ್ ಶಹನವಾಜ್ ಅಲಿಯಾಸ್ ಶಾನು, ಶಾರುಖ್, ಮೊಹಮ್ಮದ್. ಶೋಯೆಬ್ ಅಲಿಯಾಸ್ ಚುತ್ವಾ, ಆಜಾದ್, ಮೊಹಮ್ಮದ್ ಫೈಸಲ್, ರಶೀದ್ ಅಲಿಯಾಸ್ ರಾಜಾ, ಅಶ್ರಫ್ ಅಲಿ, ಪರ್ವೇಜ್ ಮತ್ತು ರಶೀದ್ ಅಲಿಯಾಸ್ ಮೋನು ಖುಲಾಸೆಗೊಂಡ ವ್ಯಕ್ತಿಗಳಾಗಿದ್ದಾರೆ.

Join Whatsapp