ಗುವಾಹಟಿ: ಪಶ್ಚಿಮ ಅಸ್ಸಾಮ್ ನ ಗೋಲ್ಪಾರ ಜಿಲ್ಲೆಯ ಸರ್ಕಾರಿ ಶಾಲೆಯೊಂದಕ್ಕೆ ಗೋಮಾಂಸ ಭಕ್ಷ್ಯವನ್ನು ಕೊಂಡೊಯ್ದ ಆರೋಪದಲ್ಲಿ ಶಿಕ್ಷಕಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅಸ್ಸಾಮ್ ನಲ್ಲಿ ಗೋಮಾಂಸಕ್ಕೆ ಸರ್ಕಾರ ನಿಷೇಧ ಹೇರಿಲ್ಲ.
ದಲಿಮಾ ನೆಸ್ಸಾ ಎಂಬವರೇ ಬಂಧಿತ ಶಿಕ್ಷಕಿಯಾಗಿದ್ದು, ಅವರನ್ನು ಗೋಲ್ಪಾರಾ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ನೆಸ್ಸಾದ ಲಖಿಪುರ ಹುರ್ಕಾಚುಂಗಿ ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿದ್ದಾರೆ.
ಕಳೆದ ವಾರ ಶಾಲೆಯಲ್ಲಿ ನಡೆದ ಅಧಿಕೃತ ಕಾರ್ಯಕ್ರಮದ ವೇಳೆ ಮಧ್ಯಾಹ್ನದ ಊಟಕ್ಕೆ ದನದ ಮಾಂಸದ ಭಕ್ಷ್ಯವನ್ನು ತಂದಿದ್ದಾರೆ ಎಂದು ಸಹೋದ್ಯೋಗಿಯೊಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ನೆಸ್ಸಾ ಅವರನ್ನು ಅಸ್ಸಾಮ್ ಪೊಲೀಸರು ವಿಚಾರಣೆ ನಡೆಸಿ ಬಂಧಿಸಿದ್ದರು. ಸದ್ಯ ಅವರ ವಿರುದ್ಧ ಐಪಿಸಿ ಸೆಕ್ಷನ್ 153 ಎ, 295 ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.