ಅಸ್ಸಾಂ: ಬಾಂಗ್ಲಾ ಹಿಂಸಾಚಾರದ ವಿರುದ್ಧದ ಜಾಥಾ: ಮುಸ್ಲಿಮ್ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಸಂಘಪರಿವಾರ

Prasthutha|

ಗುವಾಹಟಿ: ಅಸ್ಸಾಮ್ ನ ಕಲೈನ್ ನಿವಾಸಿ ಜಬೀರ್ ಅಹ್ಮದ್ ಬರ್ಬುಯಿ ಎಂಬಾತನ ಮೇಲೆ ಸಂಘಪರಿವಾರದ ಕಾರ್ಯಕರ್ತರ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ.

- Advertisement -

ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ದುರ್ಗಾಪೂಜೆ ವೇಳೆ ನಡೆದ ಕೋಮುಗಲಭೆ ವಿರೋಧಿಸಿ ಸಂಘಪರಿವಾರ ಆಯೋಜಿಸಿದ್ದ ಬೃಹತ್ ಬೈಕ್ ಜಾಥಾದ ವೇಳೆ ಜಬೀರ್ ನ ಮೇಲೆ ಹಲ್ಲೆ ನಡೆಸಲಾಗಿದೆ.

ಹಿಂದಿನಿಂದ ಆಗಮಿಸಿದ ದುಷ್ಕರ್ಮಿಗಳ ತಂಡ ನನ್ನನ್ನು ತಳ್ಳಿ, ತಲೆಗೆ ಗಾಜಿನ ಬಾಟಲಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ಹಲ್ಲೆ ನಡೆಸಿದವರೆಲ್ಲರೂ ಆರೆಸ್ಸೆಸ್ ಮತ್ತು ಬಜರಂಗದಳದ ಸದಸ್ಯರು ಎಂದು ಹಲ್ಲೆಗೊಳಗಾದ ಸಂತ್ರಸ್ತ ಜಬೀರ್ ಆರೋಪಿಸಿದ್ದಾರೆ.
ಮಾತ್ರವಲ್ಲ ಡಿಸಿ ಕಚೇರಿಯ ಮುಂಭಾಗದಲ್ಲಿ ಇನ್ನೂ ಅನೇಕ ಮುಸ್ಲಿಮ್ ಯುವಕರ ಮೇಲೆ ಪ್ರತಿಭಟನಾಕಾರರು ಹಲ್ಲೆ ನಡೆಸಿದ್ದರು ಎಂದು ಜಬೀರ್ ತಿಳಿಸಿದ್ದಾರೆ.

- Advertisement -

ಘಟನೆಗೆ ಸಂಬಂಧಿಸಿದಂತೆ ಸಿಲ್ಚಾರ್ ಸದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರವನ್ನು ವಿರೋಧಿಸಿ ವಿ.ಎಚ್.ಪಿ, ಹಿಂದೂ ಜಾಗರಣ್ ಮಂಚ್, ಭಾರತ್ ಸೇವಾಶ್ರಮ ಸಂಘ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಮತ್ತು ಸ್ಥಳೀಯ ನಾಯಕರು ಜಾಥಾ ಆಯೋಜಿಸಿದ್ದರು. ಮಾತ್ರವಲ್ಲ ಜೈ ಶ್ರೀರಾಮ್ ಘೋಷಣೆ ಸೇರಿದಂತೆ ಮುಸ್ಲಿಮ್ ವಿರೋಧಿ ಘೋಷಣೆ ಕೂಗುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋದಿಂದ ಬಹಿರಂಗವಾಗಿದೆ.

ಅಸ್ಸಾಂ ಪೊಲೀಸರು ದೂರು ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಮಣ್ ದೀಪ್ ಕೌರ್ ತಿಳಿಸಿದ್ದಾರೆ.



Join Whatsapp