ಅಸ್ಸಾಮ್ ನ ಮಾಜಿ ವಿದ್ಯಾರ್ಥಿ ನಾಯಕನ ಮೇಲೆ ಪೊಲೀಸರಿಂದ ಗುಂಡಿನ ದಾಳಿ । ತನಿಖೆ ಆದೇಶ ನೀಡಿದ ಮುಖ್ಯಮಂತ್ರಿ

Prasthutha|

ಗುವಾಹಟಿ: ಅಸ್ಸಾಮ್ ಮಾಜಿ ವಿದ್ಯಾರ್ಥಿ ನಾಯಕ ಕೀರ್ತಿ ಕಮಲ್ ಬೋರಾ ಎಂಬಾತನ ಮೇಲೆ ಪೊಲೀಸರು ನಡೆಸಿದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ತನಿಖಾ ಆಯೋಗವನ್ನು ರಚಿಸಿ ಏಳು ದಿನಗಳೊಳಗೆ ವರದಿ ಒಪ್ಪಿಸುವಂತೆ ಆದೇಶಿಸಿದ್ದಾರೆ.

- Advertisement -

ಮಾಜಿ ವಿದ್ಯಾರ್ಥಿ ನಾಯಕ ಮಾದಕ ದ್ರವ್ಯ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾನೆ ಎಂಬ ಆರೋಪದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರ ಮೇಲೆ ಆತ ದಾಳಿ ನಡೆಸಿದ ಹಿನ್ನೆಲೆಯಲ್ಲಿ ತಮ್ಮ ಆತ್ಮ ರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಯಲ್ಲಿ ಮಾಜಿ ವಿದ್ಯಾರ್ಥಿ ನಾಯಕ ಬೋರಾ ಅವರ ಎಡತೊಡೆ, ಎಡ ಕೈ, ಹಣೆಗೆ ಗಂಭೀರವಾದ ಗಾಯವಾಗಿದ್ದು, ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.

- Advertisement -

ಪೊಲೀಸರ ನಡೆಯನ್ನು ವಿರೋಧಿಸಿ ಬೋರಾ ಅವರ ಕುಟುಂಬ ಮತ್ತು ಸಹಚರರು ಪ್ರತಿಭಟನೆಯ ಬಳಿಕ ಅಸ್ಸಾಮ್ ಸರ್ಕಾರ ಭಾನುವಾರ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದೆ.



Join Whatsapp