ದಿಸ್ಪುರ್: ಮಹಿಳಾ ಅಧಿಕಾರಿಯ ಎದುರಲ್ಲೇ ಅಸ್ಸಾಮ್ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅಶ್ಲೀಲವಾಗಿ ವರ್ತಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.
ಕಾಂಗ್ರೆಸ್ ನಾಯಕ ರೋಶಲ್ ಲಾಲ್ ಬಿಟ್ಟು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಂಡು ಅಸ್ಸಾಂ ಮುಖ್ಯಮಂತ್ರಿ ಹಿಮಂತಾ ಬಿಸ್ವಾ ಶರ್ಮಾ ಕೂಡಾ ಮಹಿಳೆಯರ ಮುಂದೆ ನಾಚಿಕೆ ಮತ್ತು ಸಂಸ್ಕಾರವನ್ನು ಹೊಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನೆಟ್ಟಿಗರು ಇದು ‘ವಾಯು ಮಾಲಿನ್ಯದ ಪರಿಣಾಮ’ ಎಂದಿದ್ದಾರೆ. ಅವರು ಸ್ಕ್ರ್ಯಾಚ್ ಗಾರ್ಡ್ ಗಾಗಿ ಜಾಹೀರಾತು ನೀಡುತ್ತಿರುವುದಾಗಿರಬಹುದು ಎಂದು ಹಲವರು ಟ್ರೋಲ್ ಸುರಿಮಳೆಗೈದಿದ್ದು, ಬಿಜೆಪಿಗರಿಗೆ ಯಾವುದೇ ಶಿಷ್ಟಾಚಾರವಿಲ್ಲ ಎಂಬ ಆಕ್ರೋಶಗಳೂ ವ್ಯಕ್ತವಾಗಿದೆ.