ಇಂಗ್ಲಿಷ್ ವರ್ಣಾಕ್ಷರ ಬಾರದ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಿದ ಶಿಕ್ಷಣ ಇಲಾಖೆ

Prasthutha: November 28, 2021
school book

ಸಿಂದಗಿ: ಇಂಗ್ಲಿಷ್ ವರ್ಣಾಕ್ಷರ ಬರೆಯಲು ಬಾರದ ಕಾರಣ ತಾಲ್ಲೂಕಿನ ಗುಂದಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಬ್ಬರು ಸಹ- ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ.


ಇಬ್ಬರು ಶಿಕ್ಷಕರು ಇಂಗ್ಲಿಷ್ ವರ್ಣಾಕ್ಷರಗಳನ್ನು ತಪ್ಪಾಗಿ ಬರೆದು, ಮಕ್ಕಳಿಗೆ ಕಲಿಸಿ ಕೊಡುತ್ತಿದ್ದ ವೀಡಿಯೋ ಭಾರೀ ವೈರಲಾಗಿತ್ತು. ಇದನ್ನು ಪ್ರಶ್ನಿಸಿದ ಪಾಲಕರು, ಗ್ರಾಮಸ್ಥರ ಜೊತೆ ಶಿಕ್ಷಕರು ತಾವು ಹೇಳಿ ಕೊಡುತ್ತಿರುವುದೇ ಸರಿ ಎಂದು ವಾಗ್ವಾದ ನಡೆಸಿದ್ದರು.

ಅಮಾನತುಗೊಂಡವರನ್ನು ಸಹ-ಶಿಕ್ಷಕ ದೌಲತ್ ದೇವಕುಳೆ ಮತ್ತು ಸಹ–ಶಿಕ್ಷಕಿ ಎಂ.ಎನ್.ರಾಂಪೂರ ಮಠ ಎಂದು ಗುರುತಿಸಲಾಗಿದೆ.

ಈ ಶಿಕ್ಷರು ಮಕ್ಕಳ ಶೈಕ್ಷಣಿಕ ಪ್ರಗತಿ ಕುಂಠಿತವಾಗಲು ಕಾರಣಕರ್ತರಾಗಿದ್ದಾರೆ. ಇವರ ಮೇಲೆ ಶಿಸ್ತು ಕ್ರಮ ಜರುಗಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ನೀರಲಗಿ ಅವರು ವರದಿ ಸಲ್ಲಿಸಿದ್ದರು. ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!